ಬಾಗಲಕೋಟೆ:-ನಾನು ಮುಖ್ಯಮಂತ್ರಿ ಆದ್ರೆ ಬುಲ್ಡೋಜರ್ ನಿಯಮ ಜಾರಿ ಮಾಡ್ತೀನಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರನ್ನು ಉದ್ದೇಶಿಸಿ ಮಾತನಾಡಿದ ಯತ್ನಾಳ್, ಯೋಗಿ ಆದಿತ್ಯನಾಥ್ ಅವರ ಬುಲ್ಡೋಜರ್ ನಿಯಮ ಜಾರಿಗೆ ತರುವ ಬಗ್ಗೆ ಮಾತನಾಡಿದರು. ನಾನು ಮುಖ್ಯಮಂತ್ರಿ ಆದ್ರೆ ಸಾವಿರ ಜೆಸಿಬಿ ಆರ್ಡರ್ ಮಾಡ್ತಿನಿ, ಎಲ್ಲಾ ತಾಲೂಕುಗಳಲ್ಲಿ ತಲಾ 35 ಜೆಸಿಬಿ ಇಡ್ತೀನಿ.ಯಾರೇ ಕ್ವಾಂಯಕ್ ಅಂದ್ರೂ ಅವ್ರ ಮನೆ ಕಲಾಸ್ ಎಂದರು.
ನಾನೇನಾದ್ರೂ ಮುಖ್ಯಮಂತ್ರಿ ಆದ್ರೆ ಒಂದು ಸಾವಿರ ಜೆಸಿಬಿ ಆರ್ಡರ್ ಮಾಡ್ತೀನಿ. ಎಲ್ಲಾ ತಾಲೂಕುಗಳಲ್ಲಿ ತಲಾ 25 ಜೆಸಿಬಿ ಇಡ್ತೀನಿ, ಯಾರೇ ಒಬ್ರು ಕಿರಿಕ್ ಮಾಡಿದರೆ ಅವರ ಮನೆ ಧ್ವಂಸ ಮಾಡ್ತೀನಿ. ಇಲ್ಲದಿದ್ದರೆ ನಿಯಂತ್ರಣ ಆಗುವುದಿಲ್ಲ ಎಂದು ಹೇಳಿದರು.
ಮಹಾರಾಷ್ಟ್ರ ನಾಗಪುರನಲ್ಲಿ ಅಮಾಯಕ ಪೊಲೀಸರ ಮೇಲೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪೊಲೀಸ್ ಕಮಿಷನರ್ ಹಾಗೂ ಡಿಎಸ್‌ಪಿ ಮೇಲೆ ಹಲ್ಲೆ ಮಾಡ್ತಾರೆ ಅಂದರೆ ಅವರಿಗೆ ಎಷ್ಟು ದುರಹಂಕಾರ ಇದೆ. ಇದನ್ನೆಲ್ಲಾ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬರೀ ಮುಖ್ಯಮಂತ್ರಿ ಆಗೋದು ಲೂಟಿ ಮಾಡೋಕೆ ಅಲ್ಲ. ಯೋಗಿ ಆದಿತ್ಯನಾಥ್ ಅವರು ಭ್ರಷ್ಟಾಚಾರ ಮಾಡಿದವರ ಕುಟುಂಬದವರಿಗೆ ಮುಂದೆ ಎಂದೂ ಸರ್ಕಾರಿ ನೌಕರಿ ಸಿಗದಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ರೀತಿ ಮಾಡದೇ ಇದ್ದರೆ ನಮ್ಮ ದೇಶ ದೇಶವಾಗಿ ಉಳಿಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.