ಬೆಂಗಳೂರು: ಯತ್ನಾಳ್ʼರನ್ನು ಮುಲಾಜಿಲ್ಲದೆ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಮಂತ್ರಿಗಳಾಗಿರುವ ಶೋಭಾ ಕರಂದ್ಲಾಜೆ ಮತ್ತು
ಪ್ರಲ್ಹಾದ್ ಜೋಶಿಯವರು ವಕ್ಫ್ ಹೋರಾಟದಲ್ಲಿ ಭಾಗಿಯಾಗಿದ್ದರೇ ಹೊರತು ಸ್ವಯಂಘೋಷಿತ ಹಿಂದೂ ನಾಯಕ ರಾಜ್ಯದಲ್ಲಿ ಪರ್ಯಾಯ ನಾಯಕತ್ವ ಸೃಷ್ಟಿಸಲಿ ಅಂತಲ್ಲ ಎಂದ ಅವರು ಯತ್ನಾಳ್ ಹೆಸರು ಉಲ್ಲೇಖಿಸದೆ, ಅವರು ಪಕ್ಷದ ರಾಷ್ಟ್ರೀಯ ನಾಯಕರನ್ನು ಪ್ರಶ್ನಿಸುವಷ್ಟು ಉದ್ಧಟತನ ಪ್ರದರ್ಶಿಸುತ್ತಿದ್ದಾರೆ ಎಂದರು.
ಇನ್ನೂ ಬಿಜೆಪಿಯ ಬಂಡಾಯದ ಬೇಗುದಿ ಬೀದಿ ಜಗಳವಾಗಿ ಮನೆಯೊಂದು ಮೂರುಬಾಗಿಲಾಗಿದೆ, ರಾಜ್ಯಾಧ್ಯಕ್ಷ ವಿಜಯೇಂದ್ರ ರೆಬಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಟೀಂ ನಡುವಿನ ಟಾಕ್ ವಾರ್ ದಿನದಿಂದ ದಿನಕ್ಕೆ ಜೋರಾಗ್ತಿದೆ. ಇದು ಪಕ್ಷದ ಕಾರ್ಯಕರ್ತರಲ್ಲೂ ಗೊಂದಲ ಸೃಷ್ಟಿಸ್ತಿದೆ ಹಾಗೂ ಪಕ್ಷ ಸಂಘಟನೆ ಸೇರಿ ಸರ್ಕಾರದ ವಿರುದ್ಧದ ಹೋರಾಟಕ್ಕೂ ಹಿನ್ನಡೆಯಾಗ್ತಿದೆ.