ಮುನಿರತ್ನಗೆ ತಪ್ಪದ ಸಂಕಷ್ಟ: ಸಂತ್ರಸ್ತೆ ಬೆಡ್ ರೂಂನಲ್ಲಿ ಕ್ಯಾಮೆರಾ ಇಡಲು ಯತ್ನಿಸಿದ್ರಾ BJP ಶಾಸಕ!

0
Spread the love

ಬೆಂಗಳೂರು:- ಬಿಜೆಪಿ ಶಾಸಕ ಮುನಿರತ್ನಗೆ ಯಾಕೋ ಮೇಲಿಂದ ಮೇಲೆ ಸಂಕಷ್ಟದ ಮೇಲೆ ಸಂಕಷ್ಟ ಒದಗಿ ಬರುತ್ತಿದೆ. ಮೊದಲು ಜಾತಿನಿಂದನೆ, ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿ ಇತ್ತೀಚೆಗೆ ಜೈಲಿಂದ ಹೊರ ಬಂದಿರುವ ಮುನಿರತ್ನ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ.

Advertisement

ಲಗ್ಗೆರೆಯ ಮಾಜಿ ಕಾರ್ಪೋರೇಟರ್ ಹಾಗೂ ಅವರ ಪತಿ ಮುನಿರತ್ನ ನಾಯ್ಡು ವಿರುದ್ಧ ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ. ಸದ್ಯ ಮುನಿರತ್ನ ವಿರುದ್ಧ ದೂರು ದಾಖಲಿಸಿರುವ ದಂಪತಿ ಇದೀಗ ಎಸ್​​​ಐಟಿ ಮುಂದೆ ದಾಖಲೆಗಳನ್ನು ಸಲ್ಲಿಸಲು ಸಜ್ಜಾಗಿದ್ದಾರೆ. ಮುನಿರತ್ನ ವಿರುದ್ಧ ಹನಿಟ್ರ್ಯಾಪ್, ಕೊಲೆ ಯತ್ನದ ಆರೋಪ ಮಾಡಿರುವ ಮಾಜಿ ಕಾರ್ಪೋರೇಟರ್, ವಿಡಿಯೋ ಕೂಡ ಬಿಡುಗಡೆ ಮಾಡಿರುವುದು ಚರ್ಚೆ ಹುಟ್ಟುಹಾಕಿದೆ.

ಖಾಸಗಿ ಹೊಟೇಲ್​ ಒಂದರಲ್ಲಿ ಸುದ್ದಿಗೊಷ್ಠಿ ನಡೆಸಿದ ದಂಪತಿ, ಮುನಿರತ್ನ ತಮ್ಮ ಕುಟುಂಬಕ್ಕೆ ನೀಡಿರುವ ಕಿರುಕುಳದ ಬಗ್ಗೆ ಸಾಕ್ಷಿ ಸಮೇತ ಅಳಲು ತೋಡಿಕೊಂಡಿದ್ದಾರೆ.

ಮುನಿರತ್ನ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ನನ್ನ ಬಳಿ ಇದಕ್ಕೆ ಬೇಕಾದ ಆಡಿಯೋ, ವೀಡಿಯೋ ದಾಖಲೆ ಇದೆ. ನನ್ನ ಅಶ್ಲೀಲ ವೀಡಿಯೋ ಮಾಡಲು ಮುನಿರತ್ನ ಷಡ್ಯಂತ್ರ ಮಾಡಿದ್ದರು. ಕೊನೆಗೆ ನಾನು ನನ್ನ ಹೆಂಡತಿ ಇರುವುದನ್ನು ಚಿತ್ರೀಕರಿಸಲು ಬೆಡ್ ರೂಂನಲ್ಲಿ ಕ್ಯಾಮರಾ ಇಡಲು ಪ್ರಯತ್ನ ಪಟ್ಟಿದ್ದರು ಎಂದು ಮುನಿರತ್ನ ವಿರುದ್ಧ ಸಂತ್ರಸ್ತೆಯ ಪತಿ ಆರೋಪ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here