ವಿಜಯಪುರ: ಮಗನನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿ, ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಗನನ್ನ ಅಧ್ಯಕ್ಷ ಸ್ಥಾನದಿಂದ ಇಳಿಸಿ,
ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯಬೇಕು. ವಿಜಯೇಂದ್ರ ಹಾಗೂ ಯಡಿಯೂರಪ್ಪ ಮೇಲೆ ಹಲವು ಕೇಸ್ ಇವೆ. ಇ.ಡಿ ವಿಚಾರಣೆಗೂ ಹಾಜರಾಗಿದ್ದಾರೆ. ಇಂದಿಲ್ಲ ನಾಳೆ ಜೈಲಿಗೆ ಹೋಗ್ತಾರೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಸಲೀಂ, ಮುಶ್ರಫ್‌ರಂತಹವರನ್ನ ತಂದ್ರೆ ನಮ್ಮ ಮೇಲೆ ಕೇಸ್ ಆಗ್ತಾವೆ. ಮೊನ್ನೆ ವಿಜಯಪುರದಲ್ಲಿ ನನ್ನ ಮೇಲೆ ಕೇಸ್ ಹಾಕಿಸಿದ್ರು. ಸಲೀಂ ಪೊಲೀಸ್ ಇಲಾಖೆಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಯತ್ನಾಳ್ ಮೇಲೆ ಎಷ್ಟು ಕೇಸ್ ಆಗಿವೆ ಎಂದು ಮಾಹಿತಿ ಪಡೆದಿದ್ದಾರೆ. ರಾಜ್ಯದಲ್ಲಿ ಸೂಲಿಬೆಲೆ, ಪ್ರತಾಪ್ ಸಿಂಹ, ಮುತಾಲಿಕ್ ಟಾರ್ಗೆಟ್ ಆಗಿದ್ದಾರೆ ಎಂದು ದೂರಿದ್ದಾರೆ.



