ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಅಲಗಿಲವಾಡ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
Advertisement
ಪ್ರಧಾನ ಗುರುಗಳಾದ ಹಾಲೇಶ ಎಸ್.ಜಕ್ಕಲಿ, ಶಿಕ್ಷಕರಾದ ನೇಮೇಶ ಯರಗುಪ್ಪಿ ಸೂರ್ಯನಮಸ್ಕಾರ, ಪದ್ಮಾಸನ, ವೃಕ್ಷಾಸನ, ಶವಾಸನ, ತಾಡಾಸನ ಒಳಗೊಂಡಂತೆ ಹಲವಾರು ಯೋಗಾಸನಗಳನ್ನು ಮಾಡಿಸಿ ಅವುಗಳ ಉಪಯುಕ್ತತೆ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣಪ್ರೇಮಿಗಳಾದ ಮೈಲಪ್ಪ ಹರಿಜನ, ಗ್ರಾಮದ ಗುರು-ಹಿರಿಯರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿ ಯೋಗ ಅಭ್ಯಾಸ ಮಾಡುವದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.