ಮನೋರಮಾ ಕಾಲೇಜಿನಲ್ಲಿ ಯೋಗ ದಿನಾಚರಣೆ

0
Yoga Day Celebration at Manorama College
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಮನೋರಮಾ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ ವಹಿಸಿದ್ದರು.

Advertisement

ಸಂಸ್ಥೆಯ ಆಡಳಿತಾಧಿಕಾರಿ ಕಿಶೋರ ಮುದಗಲ್ಲ ಮಾತನಾಡಿ, ಯೋಗವು ಬೆಳಕಿನ ದೀವಿಗೆಯಂತೆ. ಒಮ್ಮೆ ಬೆಳಗಿಸಿದರೆ ಜೀವನ ಪಾವನವಾಗುತ್ತದೆ. ಯೋಗವು ಸರ್ವ ರೋಗಕ್ಕೂ ಔಷಧಿಯಾಗಿದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುವ ವಿಶೇಷ ಕಲೆಯಾಗಿದೆ ಎಂದರು.

ದೈಹಿಕ ನಿರ್ದೇಶಕ ಖಯುಮ ನವಲೂರ ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಆಸನಗಳಾದ ವಜ್ರಾಸನ, ಅರ್ಧಚಕ್ರಾಸನ, ಶಿತಾಲಿ ಪ್ರಾಣಾಯಾಮ, ಆಸನಗಳನ್ನು ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಬಿ.ಎಸ್. ಹಿರೇಮಠ, ಸಂಸ್ಥೆಯ ನಿರ್ದೇಶಕರಾದ ಮಂಜುನಾಥ ಕುಡತರಕರ, ಸಂಜಯಕುಮಾರ ಕುಡತರಕರ, ಚೇತನ ಕುಡತರಕರ, ಪಿಯುಸಿ ಸಂಯೋಜಕರಾದ ಶಾಹಿದಾ ಶಿರಹಟ್ಟಿ, ಮಹಾವಿದ್ಯಾಲಯದ ಸಂಯೋಜಕರುಗಳಾದ ಪ್ರೊ. ಸವಿತಾ ಪೂಜಾರ, ಪ್ರೊ. ಅಲ್ವಿನಾ ಡಿ, ಪ್ರೊ. ಚೈತ್ರಾ ಡಿ, ಹರೀಶ ಬಾರಕೇರ, ಕುಶಾಲ ಎಂ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here