ವಿಜಯಸಾಕ್ಷಿ ಸುದ್ದಿ, ಗದಗ : ಸಮೀಪದ ಬಿಂಕದಕಟ್ಟಿಯ ಶ್ರೀ ರಾಮಕರುಣಾನಂದ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಕೆ.ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ನಿತ್ಯ ಜೀವನದಲ್ಲಿ ಯೋಗಾಭ್ಯಾಸದ ಅವಶ್ಯಕತೆ ಮತ್ತು ಉಪಯೋಗದ ಕುರಿತು ತಿಳಿಸಿಕೊಟ್ಟರು.
ಶಾಲೆಯ ಶಿಕ್ಷಕಿ ಶೈಲಾ ಬೆರಗೇರಿ ಯೋಗದ ಮಹತ್ವ ಕುರಿತು ವಿವರಿಸಿದರು. ಇನ್ನೋರ್ವ ಶಿಕ್ಷಕಿ ಪ್ರತಿಭಾ ಕಮ್ಮಾರ್ ಸರ್ವರಿಗೂ ಯೋಗಾಭ್ಯಾಸ ಮಾಡಿಸಿದರು. ಶಾಲೆಯ ವಿದ್ಯಾರ್ಥಿನಿಯರು ಯೋಗ ನೃತ್ಯ ಪ್ರದರ್ಶಿಸಿದರು. ಶೃತಿ ಬೈಹಟ್ಟಿ ಸ್ವಾಗತಿಸಿದರು. ಶಿಕ್ಷಕ ಚನ್ನಬಸಪ್ಪ ವೆಂಕಟಾಪುರ್ ಕಾರ್ಯಕ್ರಮ ನಿರೂಪಿಸಿದರು. ಅಕ್ಕಮ್ಮ ಹರಿಜನ ವಂದಿಸಿದರು. ಯೋಗಾಭ್ಯಾಸದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.



