ವಿಜಯಸಾಕ್ಷಿ ಸುದ್ದಿ, ಗದಗ: ಯಾವುದೇ ರೋಗ ರುಜಿನಗಳು ಬರುವದನ್ನು ತಡೆಯುವ ಶಕ್ತಿ ಯೋಗಕ್ಕಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ನುಡಿದರು.
ನಗರದ ಶ್ರೀ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಶರಣ ಚರಿತಾಮೃತ ಪ್ರವಚನವನ್ನು ಉದ್ದೇಶಿಸಿ ಶ್ರೀಗಳು ಮಾತನಾಡುತ್ತಿದ್ದರು.
ಯೋಗವು ಪ್ರತಿಯೊಬ್ಬರಿಗೂ ಬಹಳ ಅವಶ್ಯವಾಗಿದ್ದು, ಅದನ್ನು ಮಾಡುತ್ತಾ ಹೋದರೆ ರೋಗ ರುಜಿನಗಳು ದೂರವಾಗುವವು. ಕಲ್ಯಾಣದಲ್ಲಿ 770 ಜನ ಶರಣರಿದ್ದರು. ಜಗತ್ತಿನ ಇತಿಹಾಸದಲ್ಲಿ ಇಷ್ಟೊಂದು ಜನ ಶರಣರು ಇದ್ದಿದ್ದು ಕಲ್ಯಾಣದಲ್ಲಿ ಮಾತ್ರ. ಎಲ್ಲ ಶರಣರು ಕೂಡಾ ಅಂದಿನ ಕಾಲಕ್ಕೆ ತಕ್ಕಹಾಗೆ ಯೋವನ್ನು ಮಾಡುತ್ತಿದ್ದರು. ಶರಣೆ ಸಜ್ಜಲಗುಡ್ಡದ ಶರಣಮ್ಮನವರು ಒಬ್ಬ ಸಾಮಾನ್ಯ ಸ್ತ್ರೀ, ಅವರು ಗುರುಗಳಿಂದ ದೀಕ್ಷೆಯನ್ನು ಪಡೆದುಕೊಂಡು ಒಬ್ಬ ದೊಡ್ಡ ಶರಣೆಯಾದರು. ಶರಣಮ್ಮರೂ ಕೂಡಾ ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದರು ಎಂದರು.
ಇಂದಿನ ಕಾಲದಲ್ಲಿ ಸ್ನಾನ ಮಾಡಲು ಗುಳಿಗೆ ಬಂದಿವೆ. ಊಟ ಮಾಡಲು ಗುಳಿಗೆ ಬಂದಿವೆ. ರಕ್ತದೊತ್ತಡ ಹೆಚ್ಚು-ಕಡಿಮೆ ಆದರೂ ಗುಳಿಗೆಗಳು ಬಂದಿವೆ. ಪ್ರತಿಯೊಂದು ರೋಗಕ್ಕೂ ಇಂದು ಮನುಷ್ಯ ಗುಳಿಗೆಯ ಮೇಲೆ ಅವಲಂಬಿತನಾಗಿದ್ದಾನೆ. ಯೋಗ ಮಾಡುವುದರಿಂದ ಎಲ್ಲ ರೋಗಗಳನ್ನು ತಡೆಯಬಹುದು. ಹಸಿವೆಯಾಗದೇ ಊಟ ಮಾಡಬಾರದು. ಎಷ್ಟು ಬೇಕು ಅಷ್ಟನ್ನೇ ತಿನ್ನಬೇಕು. ಖಾದ್ಯ ಪದಾರ್ಥಗಳನ್ನು ಹೆಚ್ಚಿಗೆ ಸೇವಿಸಬಾರದು. ಮಲಗುವಾಗ ಬಲಭುಜ ಮೇಲೆ ಮಾಡಿ ಮಲಗಿಕೊಳ್ಳಬೇಕು. ಊಟ ಆದ ನಂತರ ನೂರು ಹೆಜ್ಜೆಯನ್ನು ನಡೆಯಬೇಕು ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ ಕಮಿಟಿಯ ಹಿರಿಯ ಸದಸ್ಯ ಕೊಟ್ರಪ್ಪ ಕಮತರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ರಾಜ್ಯ ಪಂಚಮಸಾಲಿ ಸಮಾಜದ ಅಧ್ಯಕ್ಷ ಸೋಮನಗೌಡ ಮಾಲಿಪಾಟೀಲ, ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಈರಣ್ಣ ಕರಬಿಷ್ಠಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಚೇಂಬರ್ ಆಫ್ ಕಾಮರ್ಸ್ ಹುಬ್ಬಳ್ಳಿ ಇವರಿಂದ ವಾಣಿಜ್ಯ ರತ್ನ ಪ್ರಶಸ್ತಿ ಪಡೆದ ರಾಜು ಗುಡಿಮನಿಯವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಎಂ.ಎಂ. ಹಿರೇಮಠ ವಕೀಲರು, ಶಿವಣ್ಣ ಕತ್ತಿ, ವಿರೂಪಾಕ್ಷಪ್ಪ ಅಕ್ಕಿ, ಬಸವರಾಜ ಜಂತ್ಲಿ, ಶಿವಣ್ಣ ಇಟ್ನಳ್ಳಿ, ಪುರಾಣ ಪ್ರವಚನ ಸಮಿತಿ ಅಧ್ಯಕ್ಷ ಶೇಖಪ್ಪ ಹೊಂಬಳ, ಸಿದ್ದಣ್ಣ ಅರಳಿ, ಗಂಗಾಧರ ಮೇಲಗಿರಿ, ಗಂಗಾಧರ ನಂದಿಕೋಲಮಠ, ಶ್ರಿಶೈಲಪ್ಪ ಪಟ್ಟಣಶೆಟ್ಟಿ, ವಿರೂಪಾಕ್ಷಪ್ಪ ಅಂಗಡಿ, ಮಲ್ಲಿಕಾರ್ಜುನ ಹಿರೇಮಠ, ಶಂಕರ ನೀರಲಕೇರಿ, ಪಂಚಾಕ್ಷರ ಅಂಗಡಿ, ನವೀನ ನಾಲ್ವಾಡ, ಸುರೇಶ ಹೆಬಸೂರ, ಪ್ರಕಾಶ ಜಂತ್ಲಿ, ಸತ್ಸಂಗದ ಸದಸ್ಯರಾದ ಸುನಂದಾ ಜೋಬಾಳೆ, ಬೀನಾ ಮಾನ್ವಿ, ಉಮಾ ಪಟ್ಟಣಶೆಟ್ಟಿ, ಜಯಶ್ರೀ ನಿಲೂಗಲ್, ಕಸ್ತೂರಕ್ಕ ಮಾನ್ವಿ, ಶರಣಮ್ಮ ಶಿರೂರ, ಸುಶೀಲಾ ನಿಲೂಗಲ್ಲ, ನೀಲಕ್ಕ ಕಗನಳ್ಳಿ, ಅನಸಕ್ಕ ಮೇಲಗಿರಿ, ಕಲ್ಪನಾ ಹಿರೇಮಠ, ಸರಸ್ವತಿ ನಂದಿಕೋಲಮಠ, ಶೈಲಾ ಮಾನ್ವಿ ಮುತಾದವರು ಭಾಗವಹಿಸಿದ್ದರು.
ಶರಣೆ ನೀಲಮ್ಮತಾಯಿಯವರು ಮಾತನಾಡುತ್ತಾ, 12ನೇ ಶನಮಾನದಲ್ಲಿ ಶರಣರು ಸ್ತ್ರೀಯರಿಗೆ ಸಮಾನ ಅವಕಾಶ ಕೊಟ್ಟಿದ್ದರು. ಕಲ್ಯಾಣ ಅಂದರೆ ಸದ್ಗುಣ. ಪರಮಾತ್ಮನಲ್ಲಿ ಎರಡು ಶಕ್ತಿಗಳು ಇರುವವು. ಶರಣರ ಮುಖಾಂತರ ಬರುವ ಹಿತನುಡಿಗಳು ಕಾಲಕ್ಕೆ ತಕ್ಕಂತೆ ಪರಮಾತ್ಮನ ವಿಶೇಷ ಶಕ್ತಿಯಾಗಿ ಬರುವರು ಎಂದರು.