ವಿಜಯಸಾಕ್ಷಿ ಸುದ್ದಿ, ಡಂಬಳ: ವೈಯಕ್ತಿಕ ಮತ್ತು ಸಮಾಜದ ಉತ್ತಮ ಆರೋಗ್ಯಕ್ಕಾಗಿ ಯೋಗ ಅತ್ಯಂತ ಪ್ರಮುಖ ಸಾಧನ. ಯೋಗ ಜಗತ್ತಿಗೆ ಈ ನೆಲ ಕೊಟ್ಟ ಅಪೂರ್ವವಾದ ಕೊಡುಗೆ. ಇದು ಕೇವಲ ಕಸರತ್ತಲ್ಲ, ಪ್ರಕೃತಿಯೊಡನೆ ನವೀಕರಿಸಿಕೊಂಡು ನಮ್ಮನ್ನು ನಾವು ಕಂಡುಕೊಳ್ಳುವ ಪರಿ ಎಂದು ಎಸ್‌ಡಿಎಮ್‌ಸಿ ಅಧ್ಯಕ್ಷ ಗವಸಿದ್ದಪ್ಪ ಹಾದಿಮನಿ ಹೇಳಿದರು.
ಡಂಬಳ ಗ್ರಾಮದ ಡಿಪಿಇಪಿ ಶಾಲೆಯ ಆವರಣದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿಆರ್‌ಪಿ ಮೃತ್ಯುಂಜಯ ಪೂಜಾರ ಮಾತನಾಡಿ, ಆಧುನಿಕ ಜಗತ್ತಿನಲ್ಲಿರುವ ನಾವು ಒತ್ತಡದ ಜೀವನ ಸಾಗಿಸುತ್ತಿದ್ದೇವೆ. ಆರೋಗ್ಯದಿಂದ ಇರಬೇಕಾದರೆ ದಿನದ ಒಂದು ಗಂಟೆಯಾದರೂ ಯೋಗ ಮತ್ತು ಪ್ರಾಣಾಯಾಮವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಎಸ್.ಜಿ. ಪಾಟೀಲ, ಖ್ಯಾತ ಕಲಾವಿದ ಹುಲಗಪ್ಪ ಜೋಂಡಿ, ಶಿಕ್ಷಕಿಯರಾದ ಐ.ಬಿ. ಅಂಗಡಿ, ವಿ.ಆರ್. ಅಥಣಿ, ಆರ್.ಎ. ಅಕ್ಕಿ, ಪಿ.ಕೆ. ಲಮಾಣಿ, ಪಿ.ಎಮ್. ಗುಡದೂರ, ಸಿ.ಜಿ. ವಾಲ್ಮೀಕಿ, ಎಸ್‌ಡಿಎಮ್‌ಸಿ ಸದಸ್ಯರು, ವಿದ್ಯಾರ್ಥಿಗಳು ಇದ್ದರು.