ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರತಿಯೊಬ್ಬರ ಮನಸ್ಸಿನ ಏಕಾಗ್ರತೆ, ನೆಮ್ಮದಿಗೆ ಯೋಗಾಭ್ಯಾಸ ಅವಶ್ಯ ಎಂದು ಯೋಗ ಶಿಕ್ಷಕ ಗಿರೀಶ ಪಿರಂಗಿ ಹೇಳಿದರು.
ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 1ರಲ್ಲಿ ದಿ. ಸಿ.ಬಿ. ಬಡ್ನಿ ಪ್ರತಿಷ್ಠಾನದಿಂದ ಒಂದು ತಿಂಗಳ ಕಾಲ ಆಯೋಜಿಸಿದ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿ, ಇಂದು ಆಧುನಿಕತೆ ಬೆಳೆದಂತೆ ದೈಹಿಕ ಶ್ರಮದ ಕೊರತೆಯಿಂದ ಎಲ್ಲರೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿದ್ದು, ಏಕಾಗ್ರತೆಯ ಕೊರತೆಯಿಂದ ನೆಮ್ಮದಿಯ ಬದುಕು ಅಸಾಧ್ಯವಾಗಿದೆ. ನಿತ್ಯ ಪ್ರತಿಯೊಬ್ಬರೂ ಯೋಗಾಭ್ಯಾಸದಲ್ಲಿ ನಿರತರಾದರೆ ಏಕಾಗ್ರತೆಯಿಂದ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜೇಶ್ವರಿ ಬಡ್ನಿ, ಶೋಭಾ ಪಾಟೀಲ, ಸುಮನಾ ಚವಡಿ, ಪುಷ್ಪಾ ಮಾದಮ್ಮನವರ, ಕೆ.ಎಂ. ಹೆರಕಲ್ಲ, ಮಾಹಾಂತೇಶ ನಪೂರಿಮಠ, ಶಿವಾನಂದ ಆಪ್ತಗೇರಿ, ಹರ್ಷ ಹಳ್ಳಿ, ವಿ.ಎಂ. ಬಿನ್ನಾಳ, ಬಸವರಾಜ ಬಡ್ನಿ, ಮಂಜುಳಾ ದೇಸಾಯಿಮಠ ಸಂತೋಷ ನೀಲಗುಂದ ಮುಂತಾದವರಿದ್ದರು.


