ಬೆಂಗಳೂರು:- ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ಕೋರ್ಟ್ ಮತ್ತೆ ವಜಾ ಮಾಡಿದೆ.
ಈ ಮೂಲಕ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ್ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಮತ್ತೆ ಆಘಾತವಾಗಿದೆ. ವಿಜಯ್ ಕುಲಕರ್ಣಿ ಅರ್ಜಿಗೆ ಸಿಬಿಐ ಕೂಡ ಆಕ್ಷೇಪಣೆ ಎತ್ತಿತ್ತು. ಪ್ರಮುಖ ಸಾಕ್ಷಿಗಳು ಯಾರೆಂದು ಆರೋಪಿ ನಿರ್ಧರಿಸಲು ಸಾಧ್ಯವಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡದಂತೆ ವಕೀಲರು ಮನವಿ ಮಾಡಿದ್ರು.
ವಾದ-ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ವಜಾ ಮಾಡಿದೆ. ಇದೇ ಪ್ರಕರಣದ ಮತ್ತೋರ್ವ ಆರೋಪಿ ಚಂದ್ರಶೇಖರ ಇಂಡಿಗೆ ಜಾಮೀನು ಮಂಜೂರು ಮಾಡಿದೆ.



