ಧಾರವಾಡ: ಯೋಗೇಶ್ವರ್ ನಮ್ಮ ಪಕ್ಷಕ್ಕೆ ಬಂದ್ರೆ ವೈಯಕ್ತಿಕವಾಗಿ ಸ್ವಾಗತ ಮಾಡುತ್ತೇನೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಹೈಕಮಾಂಡ್, ಅಧ್ಯಕ್ಷರು ಹಾಗೂ ಸಿಎಂ ಅವರ ಒಪ್ಪಿಗೆ ಮೇರೆಗೆ ಅವರು ನಮ್ಮ ಪಕ್ಷಕ್ಕೆ ಬರಬಹುದು. ನಮ್ಮ ಪಕ್ಷಕ್ಕೆ ಬಂದರೆ ವೆಲ್ ಕಮ್ ಮಾಡುತ್ತೇನೆ ಎಂದಿದ್ದಾರೆ.
Advertisement
ಸಂಡೂರು ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ, ಟಿಕೆಟ್ ವಿಚಾರ ಬಗೆಹರಿದಿದೆ. ಆದರೆ, ಯಾರಿಗೆ ಫೈನಲ್ ಆಗುತ್ತದೆ ಎನ್ನುವುದನ್ನು ನೋಡಬೇಕು. ಸಂಸದ ತುಕಾರಾಂ ಅವರ ಪತ್ನಿಯ ಹೆಸರು ಇದೆ. ಇನ್ನೂ ಅಧಿಕೃತವಾಗಿ ಹೊರಗೆ ಬಂದಿಲ್ಲ. ನಮ್ಮ ತೀರ್ಮಾನವನ್ನು ನಾವು ಹೇಳಿದ್ದೇವೆ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ನೋಡಬೇಕು ಎಂದು ಹೇಳಿದ್ದಾರೆ.