ಇಂದು ಟಾಲಿವುಡ್ ನಟ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧುಲಿಪಾಲ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಕ್ಕಿನೇನಿ ನಾಗಾರ್ಜುನ್ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಮದುವೆ ನೆರವೇರುತ್ತಿದೆ. ಇದೀಗ ಮದುವೆ ಹುಡುಗಿ ಶೋಭಿತಾ ಬಗ್ಗೆ ಸಮಂತಾ ಮಾತನಾಡಿದ್ದು ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂದಿದ್ದಾರೆ.
ಅಂದ ಹಾಗೆ ಇದು ನಾಗ ಚೈತನ್ಯ ಅವರ ಮಾಜಿ ಪತ್ನಿ ಸಮಂತಾ ಅಲ್ಲ.ಇವರು ಶೋಭಿತಾ ಸಹೋದರಿ ಸಮಂತಾ ಧೂಳಿಪಾಲ್. ಮದುವೆಗೂ ಮುನ್ನದ ಕೆಲವು ಶಾಸ್ತ್ರ ನೆರವೇರಿದೆ. ಈ ಫೋಟೋ ಹಂಚಿಕೊಂಡಿರೋ ಶೋಭಿತಾ ಸಹೋದರಿ ಸಮಂತಾ ಧುಲಿಪಾಲ್ , ‘ಅತ್ಯಂತ ಪ್ರಭಾವಶಾಲಿ ವ್ಯಕ್ತಿ. ಅತ್ಯಂತ ಸುಂದರ ಮದುವೆ ಹುಡುಗಿಗೆ ಚಿಯರ್ಸ್. ನಿಮಗೆ ಪ್ರೀತಿ ಅಕ್ಕ’ ಎಂದು ಬರೆದುಕೊಂಡಿರೂ ಸಮಂತಾ #SoChay ಹ್ಯಾಶ್ಟ್ಯಾಗ್ ಹಾಕಿದ್ದಾರೆ.
ಗುರುಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಶೋಭಿತಾ ಹಾಗೂ ನಾಗಚೈತನ್ಯ ಮದುವೆ ಆಗುತ್ತಿದ್ದಾರೆ. ಶೋಭಿತಾ ಹಾಗೂ ನಾಗ ಚೈತನ್ಯ ವಿವಾಹದ ಬಗ್ಗೆ ಕೆಲವು ವದಂತಿ ಹಬ್ಬಿದ್ದವು. ಆ ಪೈಕಿ ಇವರ ಮದುವೆ ಆಲ್ಬಂನ ಶೂಟ್ ಮಾಡಲು ನೆಟ್ಫ್ಲಿಕ್ಸ್ನವರಿಗೆ ಹಕ್ಕನ್ನು ನೀಡಿದ್ದಾರೆ ಎಂದು ವರದಿ ಆಗಿತ್ತು. ಇದನ್ನು ಈ ಜೋಡಿ ಅಲ್ಲಗಳೆದಿದ್ದರು. ನಾವು ಆ ರೀತಿ ಮಾಡಿಲ್ಲ ಎಂದು ಜೋಡಿ ಹೇಳಿಕೊಂಡಿತ್ತು. ಇಂದು ನಡೆಯಲಿರುವ ಮದುವೆಯಲ್ಲಿ ರಾಜಕೀಯ ಗಣ್ಯರು, ನಟ ನಟಿಯರು ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.