ಚಿಕ್ಕಮಗಳೂರು : ಭಾರತ ದೇಶದಲ್ಲಿರಲು ನೀನು ನಾಲಾಯಕ್ ಎಂದು ಹೇಳುವ ಮೂಲಕ ಸಚಿವ ಜಮೀರ್ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಹಲವು ಜಿಲ್ಲೆಯ ರೈತರಿಗೆ ವಕ್ಫ್ ನೋಟಿಸ್ ವಿಚಾರವಾಗಿ ಜಮೀರ್ ವಿರುದ್ಧ ಪ್ರಮೋದ್ ಮುತಾಲಿಕ್ ಕೆಂಡಾಮಂಡಲರಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆದ ದತ್ತಮಾಲಾ ಧರ್ಮಸಭೆಯಲ್ಲಿ ಮಾತನಾಡಿದ ಮುತಾಲಿಕ್, ಸಚಿವ ಜಮೀರ್ ಅಹಮದ್ ಅವರನ್ನ ಔರಂಗಜೇಬ್ ಗೆ ಹೋಲಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ 25 ಸಾವಿರ ಬಾಂಗ್ಲಾದೇಶಿ ಮುಸ್ಲಿಮರಿದ್ದಾರೆ. ಅವರನ್ನ ಜಮೀರ್ ಸಾಕಿದ್ದಾನೆ, ಸಾಕ್ತಿದ್ದಾನೆ, ಓಟರ್ ಲೀಸ್ಟ್ ತಯಾರು ಮಾಡಿದ್ದಾರೆ. ಈ ರೀತಿ ಅನೇಕ ಬ್ಲಂಡರ್ ಗಳನ್ನ ಸನ್ಮಾನ್ಯ ಔರಂಗಜೇಬ್ ಮಾಡಿದ್ದಾನೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಬಿಜೆಪಿಯವರು ಜಮೀರ್ ನನ್ನು ಗಡಿಪಾರು, ಕಿತ್ತಾಕಿ, ಸಸ್ಪೆಂಡ್ ಮಾಡಿ ಅಂತಿದ್ದಾರೆ. ಆದರೆ ಗಡಿಪಾರು, ಸಸ್ಪೆಂಡ್ ಬೇಡ. ಯಾವುದಾರೂ ಆಲದಮರಕ್ಕೆ ಆತನನ್ನು ನೇಣು ಹಾಕಿ. ಜಮೀರ್ ಈ ದೇಶದಲ್ಲಿ ಇರಲು ಲಾಯಕ್ಕಿಲ್ಲ, ನಾಲಾಯಕ್ ಇದಿಯಾ ನೀನು. ಯಾರದ್ದು ಬೇಕು ಜಮೀನು, ಇಲ್ಲಿನ ಭೂಮಿ, ಕಟ್ಟಡ, ನುಂಗಿ ನೀರು ಕುಡಿಯೋಕೆ ನಿಮ್ಮ ಅಪ್ಪಂದ ಎಂದು ಹೇಳುವ ಮೂಲಕ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ.