‘ಬಿಗ್ ಬಾಸ್ ಕನ್ನಡ 12’ ಮನೆಯಲ್ಲಿ ಈ ವಾರ ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ, ಅಧಿಕಾರದ ಬಳಕೆಯಿಂದಲೇ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವಿನ ಮಾತಿನ ಯುದ್ಧ ಪ್ರೇಕ್ಷಕರ ಗಮನ ಸೆಳೆದಿದೆ.
ಹಿಂದೆ ಇತರ ಸ್ಪರ್ಧಿಗಳು ಕ್ಯಾಪ್ಟನ್ ಆಗಿದ್ದಾಗ ಕೆಲಸಕ್ಕೆ ನಿರ್ಲಕ್ಷ್ಯ ತೋರಿಸಿದ್ದ ಗಿಲ್ಲಿ ನಟ, ಈಗ ತಾವೇ ಕ್ಯಾಪ್ಟನ್ ಆದ ಬಳಿಕ ಇತರರು ಸಹಕರಿಸದಿದ್ದಕ್ಕೆ ಕೋಪಗೊಂಡಿದ್ದಾರೆ. ಇದರ ಪರಿಣಾಮವಾಗಿ ಅಶ್ವಿನಿ ಗೌಡರ ಜೊತೆ ತೀವ್ರ ವಾಗ್ವಾದ ನಡೆದಿದೆ.
ಬಿಗ್ ಬಾಸ್ ನೀಡಿದ್ದ ವಿಶೇಷ ಅಧಿಕಾರದಡಿ, ಗಿಲ್ಲಿ ನಟ ಅವರು ಅಶ್ವಿನಿ ಗೌಡರಿಂದ ನಾಮಿನೇಷನ್ ಅಧಿಕಾರವನ್ನು ಕಿತ್ತುಕೊಂಡರು. ಇದಕ್ಕೆ ಕಾರಣವಾಗಿ, “ಕಿಚನ್ ಕೆಲಸ ಹೇಳಿದಾಗ ಪ್ರತಿಕ್ರಿಯೆ ಇಲ್ಲ. ಮಾತಿನಲ್ಲಿ ಶುಗರ್ ಕೋಟಿಂಗ್ ಇದೆ. ರೂಲ್ ಬುಕ್‌ಗೆ ವಿರುದ್ಧವಾದ ಆಣೆ ಮಾಡಿಸಿಕೊಳ್ಳುತ್ತಿದ್ದಾರೆ” ಎಂದು ಗಿಲ್ಲಿ ನಟ ಸ್ಪಷ್ಟನೆ ನೀಡಿದರು.
ಆದರೆ ಅಶ್ವಿನಿ ಗೌಡ ಈ ನಿರ್ಧಾರವನ್ನು ಒಪ್ಪಲಿಲ್ಲ.
“ನಿನ್ನಂತವನು ಕ್ಯಾಪ್ಟನ್ ಆದರೆ ಇದೇ ಆಗೋದು. ಇದು ಅಧಿಕಾರದ ಬಳಕೆ ಅಲ್ಲ, ದುರಹಂಕಾರ. ಇದು ವ್ಯಕ್ತಿತ್ವದ ಆಟ, ಅಹಂಕಾರದ ಆಟ ಅಲ್ಲ. ನನ್ನನ್ನು 2.0 ರೀತಿ ಇರಲು ಬಿಡು. ನೀನು ಏನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ” ಎಂದು ಅಶ್ವಿನಿ ಗೌಡ ಗಿಲ್ಲಿ ನಟ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಜಗಳದಿಂದ ಬಿಗ್ ಬಾಸ್ ಮನೆಯಲ್ಲಿ ಅಧಿಕಾರ, ಅಹಂಕಾರ ಮತ್ತು ವ್ಯಕ್ತಿತ್ವದ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಗಿಲ್ಲಿ ನಟ ಅವರ ಕ್ಯಾಪ್ಟನ್ಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ವಿವಾದಗಳಿಗೆ ಕಾರಣವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.



