ಬಹಳಷ್ಟು ಜನ ಬೊಜ್ಜು, ಕೊಬ್ಬು, ದಡೂತಿ ದೇಹದಿಂದ ಹೆಣಗಾಡುತ್ತಿರುತ್ತಾರೆ. ಅಶಿಸ್ತಿನ ಜೀವನಶೈಲಿ ಮತ್ತು ಹೆಚ್ಚು ಹೆಚ್ಚು ಕುಳಿತುಕೊಳ್ಳುವ ಅಭ್ಯಾಸಗಳಿಂದ ದೇಹ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡಿಕೊಳ್ಳಲಾಗುತ್ತಿದೆ. ದೇಹದಲ್ಲಿ ಬೊಜ್ಜು. ಕೊಬ್ಬು ಕಡಿಮೆ ಮಾಡಿಕೊಳ್ಳಲು ಬರೀ ವ್ಯಾಯಾಮ ಮಾಡಿದರೆ ಸಾಲುವುದಿಲ್ಲ.
ಆರೋಗ್ಯಕರ ಆಹಾರ ದೇಹ ಸೇರುವುದು ಮುಖ್ಯವಾಗುತ್ತದೆ. ನೈಸರ್ಗಿಕ ಕೊಬ್ಬನ್ನು ಸುಡುವ ಗುಣಗಳನ್ನು ಹೊಂದಿರುವ ಕೆಲವು ಆಹಾರಗಳನ್ನು ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಲು ಸಹಾಯವಾಗುತ್ತದೆ. ಅದರಲ್ಲೂ ಹಸಿರು ಆಹಾರಗಳು ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ರಾಮಬಾಣದಂತೆ ಕೆಲಸ ಮಾಡುತ್ತದೆ.
ತೂಕ ಹೆಚ್ಚಳದಿಂದ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಆದರೆ ನೀವೇನಾದರೂ ಆರೋಗ್ಯಕರ ರೀತಿಯಲ್ಲಿ ಹಾಗೂ ಹಣ ಖರ್ಚು ಮಾಡದೇ ತೂಕ ಇಳಿಸಿಕೊಳ್ಳುವ ಬಯಕೆ ಹೊಂದಿದ್ದರೆ, ಬೆಳಗ್ಗೆದ್ದು ಈ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿ. ಹಾಗಾದ್ರೆ ಆ ಎಲೆಗಳು ಯಾವುವು ಅಂತೀರಾ? ಈ ಸ್ಟೋರಿ ಓದಿ.
ಕೊತ್ತಂಬರಿ ಸೊಪ್ಪು: ಸಾಮಾನ್ಯವಾಗಿ ಕೊತ್ತಂಬರಿಯನ್ನು ಎಲ್ಲಾ ರೀತಿಯ ಭಕ್ಷ್ಯಗಳಿಗೂ ಅಲಂಕಾರಕ್ಕೆ ಉಪಯೋಗಿಸುತ್ತಾರೆ. ಇದರಲ್ಲಿ ಕಡಿಮೆ ಕ್ಯಾಲೋರಿ ಅಂಶವಿದ್ದು, ಹೆಚ್ಚು ಫೈಬರ್ ಅಂಶವಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಜೊತೆಗೆ ತೂಕವನ್ನು ಕಳೆದುಕೊಳ್ಳಲು ಸಹಾಯಕವಾಗಿದೆ.
ಕರಿಬೇವಿನ ಎಲೆಗಳು: ಕರಿಬೇವಿನ ಎಲೆಯನ್ನು ಹೆಚ್ಚಾಗಿ ದಕ್ಷಿಣ ಭಾರತದ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಅಲ್ಲದೇ ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ನೀವೇನಾದರೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಕರಿಬೇವನ್ನು ಸೇವಿಸಬಹುದು. ಏಕೆಂದರೆ ಕರಿಬೇವಿನ ಎಲೆಗಳು ತೂಕ ಇಳಿಕೆಗೆ ಸಹಾಯಕವಾಗಿದೆ. ಕರಿಬೇವಿನ ಎಲೆಗಳು ದೇಹದಿಂದ ವಿಷ ಮತ್ತು ಅನಗತ್ಯ ಕೊಬ್ಬನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಈ ಎಲೆಗಳನ್ನು ತೊಳೆದು ಅಗಿಯಿರಿ. ಇದು ಕೊಲೆಸ್ಟ್ರಾಲ್ ಕರಗಿಸುವುದಷ್ಟೇ ಅಲ್ಲದೇ, ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ರೋಸ್ಮರಿ: ರೋಸ್ಮರಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಔಷಧೀಯ ಗುಣಗಳನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಅನೇಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಕೇವಲ ತೂಕ ಇಳಿಕೆಯಷ್ಟೇ ಅಲ್ಲದೇ, ಈ ಸೊಪ್ಪು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಮೂಲಕ ಮಧುಮೇಹದಿಂದ ರಕ್ಷಿಸುತ್ತದೆ.
ಪಾರ್ಸ್ಲಿ: ಇದು ನೈಸರ್ಗಿಕ ಮೂಲಿಕೆಯಾಗಿದೆ. ಇದು ತೂಕ ನಷ್ಟಕ್ಕೆ ಸಹಕಾರಿ ಆಗಿದೆ. ಪಾರ್ಸ್ಲಿ ನೀರು ತೂಕ ಮತ್ತು ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾರ ಮಾಡುತ್ತದೆ. ಇದು ದೇಹದ ಚಯಾಪಚಯ ಪ್ರಕ್ರಿಯೆ ಹೆಚ್ಚಿಸುತ್ತದೆ. ಇದು ಫೈಬರ್ನಲ್ಲಿ ಸಮೃದ್ಧವಾಗಿದೆ. ಇದರಿಂದಾಗಿ ಜೀರ್ಣಕ್ರಿಯೆ ಉತ್ತಮವಾಗಿ ಉಳಿಯುತ್ತದೆ.
ಓರೆಗಾನೊ: ಸಾಮಾನ್ಯವಾಗಿ ಇಟಾಲಿಯನ್ ಆಹಾರದಲ್ಲಿ ಕಂಡು ಬರುವ ಓರೆಗಾನೊ ಸಹ ತೂಕ ನಷ್ಟಕ್ಕೆ ತುಂಬಾ ಸಹಕಾರಿ ಆಗಿದೆ. ಓರೆಗಾನೊವನ್ನು ಪಿಜ್ಜಾ ಮತ್ತು ಪಾಸ್ತಾ ತಯಾರಿಕೆಯಲ್ಲಿ ಸೇರಿಸಲಾಗುತ್ತದೆ. ಇದು ಪಾಲಿಫಿನಾಲ್ಗಳು ಮತ್ತು ಇನ್ಸುಲಿನ್ ಅನ್ನು ಕಡಿಮೆ ಮಾಡುವ ಫ್ಲೇವನಾಯ್ಡ್ಗಳಂತಹ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿದೆ.
ಇದು ತೂಕ ಕಡಿಮೆ ಮಾಡಲು ಮತ್ತು ಮಲಬದ್ಧತೆ ಸಮಸ್ಯೆ ತೊಡೆದು ಹಾಕಲು ಸಹಾಯ ಮಾಡುತ್ತದೆ.