ರಾಜ್ ಬಿ ಶೆಟ್ಟಿ ನಟನೆಯ ಸು ಫ್ರಮ್ ಸೋ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಚಿತ್ರದ ಓಟಕ್ಕೆ ಸಾಟಿಯೇ ಇಲ್ಲವಾಗಿದೆ. ದೇಶ ವಿದೇಶದಲ್ಲೂ ಸು ಫ್ರಮ್ ಸೋ ಮೋಡಿ ಮಾಡುತ್ತಿದ್ದು ಈ ಬಗ್ಗೆ ರಾಜ್ ಬಿ ಶೆಟ್ಟಿ ಮಾತನಾಡಿದ್ದಾರೆ. ಅಲ್ಲದೆ ಗ್ಯಾಂಗ್ ಮಾಫಿಯಾ ಎಂದವರಿಗೆ ಶೆಟ್ರು ಖಡಕ್ ಆಗಿಯೇ ಟಾಂಗ್ ಕೊಟ್ಟಿದ್ದಾರೆ.
ನಮ್ಮ ಸ್ನೇಹ ಗಾಢವಾಗಿದೆ…ಪ್ರಾಮಾಣಿಕವಾಗಿದೆ. ನನ್ನ ಮೊದಲ ಚಿತ್ರ ಒಂದು ಮೊಟ್ಟೆಯ ಕಥೆ ಮಾಡಿದ್ದೆ. ಆಗ ರಿಷಬ್ ಶೆಟ್ಟಿ ಈ ಚಿತ್ರ ಮೆಚ್ಚಿದರು. ರಕ್ಷಿತ್ ಶೆಟ್ಟಿ ಕೂಡ ಇಷ್ಟಪಟ್ಟರು. ಆಗಲೇ ನಮ್ಮ ಸ್ನೇಹ ಗಟ್ಟಿಯಾಯಿತು. ನಾನು ಬೆಂಗಳೂರಿಗೆ ಬರೋ ಮೊದಲೇ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಇಂಡಸ್ಟ್ರಿಯಲ್ಲಿದ್ದರು.
ಒಂದು ಮೊಟ್ಟೆಯ ಕಥೆ ಆದ್ಮೇಲೆ ನಾನು ಬಂದೆ. ಬಂದ್ಮೇಲೆ ಚಾರ್ಲಿ ಚಿತ್ರಕ್ಕೆ ಬರೆದೆ. ಕಾಂತಾರ ಚಿತ್ರದ ಆರಂಭ ಮತ್ತು ಕೊನೆಯ ದೃಶ್ಯಗಳನ್ನು ಬರೆದೆ. ಆದರೆ, ಲಾಕ್ ಡೌನ್ ಟೈಮ್ ಅಲ್ಲಿಯೇ ಗರುಡ ಗಮನ ರಿಷಭ ವಾಹನ ಮಾಡಿದೆ. ಆಗ ಈ ಚಿತ್ರ ನೋಡಿದ ರಕ್ಷಿತ್ ಶೆಟ್ಟಿ ಹೇಳಿದ್ರು. ನಾನು ಈ ಒಂದು ಚಿತ್ರವನ್ನ ಪ್ರೆಸೆಂಟ್ ಮಾಡ್ಲಾ ಅಂತಲೇ ಕೇಳಿದರು. ಮಾಡಿ ಅಂತಲೇ ಹೇಳಿದೆ..
ಸಿನಿಮಾರಂಗದಲ್ಲಿ ಪ್ರಾಮಾಣಿಕ ಸ್ನೇಹಿತರು ಸಿಗೋದು ಕಷ್ಟ. ಆದರೆ, ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಪ್ರಾಮಾಣಿಕವಾಗಿದ್ದಾರೆ. ಆ ಕಾರಣಕ್ಕೇನೆ ನಮ್ಮ ಸ್ನೇಹ ಗಟ್ಟಿಯಾಗಿದೆ. ಪರಸ್ಪರ ಚಿತ್ರಗಳನ್ನು ನೋಡುತ್ತೇವೆ. ಮೆಚ್ಚಿಕೊಳ್ಳುತ್ತೇವೆ. ಸು ಫ್ರಮ್ ಸೋ ಚಿತ್ರದ ರಿಪೋರ್ಟ್ ತಿಳಿದ ರಕ್ಷಿತ್ ಶೆಟ್ಟಿ ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದರೆ, ಶೆಟ್ಟಿ ಮಾಫಿಯಾ…ಶೆಟ್ಟಿ ಗ್ಯಾಂಗ್ ಅಂತ ಹೇಳ್ತಾರೆ. ಹಾಗಂತ ಹೇಳೋರಿಗೆ ನಾನು ಒಂದು ಮಾತು ಹೇಳುತ್ತೇನೆ. “ನೀವು ಗ್ಯಾಂಗ್ ಮಾಡಿಕೊಳ್ಳಿ ಬ್ರದರ್. ಬೇಡ ಅಂತ ಹೇಳಿದವ್ರು ಯಾರು” ನೀವು ಒಂದು ಗ್ಯಾಂಗ್ ಕಟ್ಟಿಕೊಳ್ಳಿ ಎಂದು ರಾಜ್ ಬಿ ಶೆಟ್ಟಿ ಹೇಳಿಕೊಂಡಿದ್ದಾರೆ.