ಯುವ ನಾಯಕ ಕೃಷ್ಣಗೌಡ ಪಾಟೀಲರಿಗೆ ಹೈದರಾಬಾದ್‌ ನಲ್ಲಿ ಗೌರವ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೃಷ್ಣಗೌಡ ಪಾಟೀಲರು ಹೈದರಾಬಾದ್ನಲ್ಲಿ ನಡೆದ ಪ್ರೆಮಿಯರ್ ವಾಲಿಬಾಲ್ ಲೀಗ್‌ನ (PVL) 21ನೇ ಪಂದ್ಯ — ಗೋವಾ ಹಾಗೂ ಕೋಲ್ಕತ್ತಾ ತಂಡಗಳ ನಡುವಿನ ಪಂದ್ಯದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಗೌರವ ಪಡೆದಿದ್ದಾರೆ.

Advertisement

ಯುವ ಕಾಂಗ್ರೆಸ್ ನೇತೃತ್ವದಲ್ಲಿ ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಗದಗ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದ ಅನೇಕ ಭಾಗಗಳಲ್ಲಿ ಹಾಗೂ ಬೇರೆ ರಾಜ್ಯಗಳಲ್ಲಿಯೂ ತಮ್ಮ ಮುಖಂಡತ್ವದಿಂದ ಗಮನ ಸೆಳೆದಿರುವ ಕೃಷ್ಣಗೌಡ ಪಾಟೀಲ, ಈ ಹಂತದಲ್ಲೂ ಪ್ರಖ್ಯಾತಿಯನ್ನು ಗಳಿಸುತ್ತಿದ್ದಾರೆ. ಇವರ ಸಾಧನೆ ಯುವ ನಾಯಕರಿಗೆ ಪ್ರೇರಣೆಯಾಗಿದೆ ಎಂದು ಗದಗ-ಬೆಟಗೇರಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅನ್ವರ್ ನದಾಫ್ ಹಾಗೂ ಅಭಿಷಯ್ ಸೇರಿದಂತೆ ಹಲವಾರು ಯುವ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

“ಕೃಷ್ಣಗೌಡ ಪಾಟೀಲರು ಇನ್ನೂ ಹೆಚ್ಚಿನ ಹಂತಗಳಲ್ಲಿ ಜವಾಬ್ದಾರಿಯುಳ್ಳ ಸ್ಥಾನಗಳವರೆಗೆ ಏರಲಿ” ಎಂಬದು ಅವರ ಅಭಿಮಾನಿಗಳ ಆಶಯವಾಗಿದೆ.


Spread the love

LEAVE A REPLY

Please enter your comment!
Please enter your name here