ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ: ಚಿಕಿತ್ಸೆ ಫಲಕಾರಿಯಾಗದೆ ಸಾವು!

0
Spread the love

ಬೀದರ್: ಮೊಬೈಲ್ ಆನ್‌ಲೈನ್ ಗೇಮ್ ಹುಚ್ಚಾಟಕ್ಕೆ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡ ವ್ಯಕ್ತಿಯೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ. ವಿಜಯ್‌ಕುಮಾರ್ ಜಗನ್ನಾಥ ಹೊಳ್ಳೆ(25), ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿದ ಯುವಕನಾಗಿದ್ದು,

Advertisement

ಮೂಲತಃ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ಯುವಕನಾಗಿರುವ ವಿಜಯ ಕುಮಾರ್, ಬಿ. ಫಾರ್ಮಾಸಿ ಪದವೀಧರನಾಗಿದ್ದರೂ, ಬೇಗ ಮತ್ತು ಸುಲಭವಾಗಿ ಹಣ ಗಳಿಸುವ ದುರಾಸೆಯಿಂದ ಆನ್‌ಲೈನ್‌ ಗೇಮ್ ಹುಚ್ಚು ಹತ್ತಿಸಿಕೊಂಡಿದ್ದ ವಿಜಯಕುಮಾರ್.  ಕಳೆದ ಕೆಲವು ತಿಂಗಳಿಂದ ಆನ್‌ಲೈನ್‌ಗೇಮ್‌ ನಲ್ಲಿ ಸುಮಾರು 12 ಲಕ್ಷ ರೂ ಕಳೆದುಕೊಂಡಿದ್ದ ಯುವಕ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ.

ಈಗಾಗಲೇ 10 ಲಕ್ಷ ರೂ. ಸಾಲವನ್ನು ತೀರಿಸಿದ್ದ ಕುಟುಂಬಸ್ಥರು. ಆದರೂ ಮತ್ತೆ 2 ಲಕ್ಷ ರೂ. ಆನ್‌ಲೈನ್ ಗೇಮ್ ಆಡಲೆಂದೇ ಸಾಲ ಮಾಡಿದ್ದ ವಿಜಯ ಕುಮಾರ. ಮತ್ತೆ ಸಾಲ ಮಾಡಿಕೊಂಡಿರುವ ವಿಷಯ ಮನೆಯಲ್ಲಿ ಗೊತ್ತಾದ್ರೆ ತೊಂದರೆ ಆಗುತ್ತೆ ಎಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಈ ಕುರಿತು ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


Spread the love

LEAVE A REPLY

Please enter your comment!
Please enter your name here