ಹೆಜ್ಜೇನು ದಾಳಿಗೆ ಯುವಕ ಸಾವು: ತಂದೆ ಸ್ಥಿತಿ ಗಂಭೀರ!

0
Spread the love

ಹಾಸನ:- ಹೆಜ್ಜೇನು ದಾಳಿಗೆ ಯುವಕ ಸಾವನ್ನಪ್ಪಿರುವ ಘಟನೆ ಹಾಸನ‌ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬಾಣನಕೆರೆ ಗ್ರಾಮದಲ್ಲಿ ಜರುಗಿದೆ.

Advertisement

ತಂದೆ ಜೊತೆ ಸೋಮವಾರ ಜಮೀನಿಗೆ‌ ತೆರಳಿದ್ದ ವೇಳೆ ಏಕಾ ಏಕಿ ಹೆಜ್ಜೇನು ದಾಳಿ ನಡೆದಿದೆ. ಪರಿಣಾಮ 30 ವರ್ಷದ ಬಿಕೆ ಚರಣ್ ಸಾವನ್ನಪ್ಪಿದ್ದಾನೆ. ಇನ್ನೂ ಘಟನೆಯಲ್ಲಿ ಚರಣ್ ತಂದೆ ಕುಮಾರ್ ಸ್ಥಿತಿಯು ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮೊದಲಿಗೆ ಹೆಜ್ಜೇನು ದಾಳಿಯಿಂದ ತೀವ್ರ ಅಸ್ವಸ್ಥಗೊಂಡ ತಂದೆ-ಮಗನನ್ನು ಬೆಳ್ಳೂರು ಕ್ರಾಸ್ ನ ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಯುವಕ ಚರಣ್ ಮೃತಪಟ್ಟಿದ್ದಾರೆ. ತಂದೆ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ನುಗ್ಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here