ಬೆಂಗಳೂರು :- ಹೃದಯಾಘಾತದಿಂದ ಪಾರ್ಕ್ ಮಾಡಿದ್ದ ಕಾರಿನಲ್ಲೇ ಯುವಕ ಸಾವನ್ನಪ್ಪಿದ ಘಟನೆ ನಗರದ ಬ್ರೂಕ್ ಫೀಲ್ಡ್ ರಸ್ತೆಯಲ್ಲಿ ಜರುಗಿದೆ.
Advertisement
ಫೆ. 20 ರಂದು ಈ ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತನ್ನ ಗ್ರ‍್ಯಾಂಡ್ ಐಟೆನ್ ಕಾರಿನಲ್ಲಿ ಯುವಕ ಮೃತಪಟ್ಟಿದ್ದು, ಮೃತದೇಹ ನೋಡಿದ ಅಪರಿಚಿತ ವ್ಯಕ್ತಿ ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.