ಹುಡುಗಿ ಎಂದು ಯುವಕನಿಗೆ ನಗ್ನ ವಿಡಿಯೋ ಕರೆಗೆ ಒತ್ತಾಯ: ಕಾಮುಕನಿಗೆ ಬಿತ್ತು ಧರ್ಮದೇಟು!

0
Spread the love

ಮಂಗಳೂರು:-ಜಿಲ್ಲೆಯ ಬಂಟ್ವಾಳದ ಕೊಲ್ನಾಡು ಗ್ರಾಮದ ಕುಡ್ತಮುಗೇರಿನಲ್ಲಿ ಮುಸ್ಲಿಂ ಯುವಕನಿಗೆ ಹಿಂದೂ ಯುವಕರು ಗೂಸಾ ಕೊಟ್ಟಿರುವ ಘಟನೆ ಜರುಗಿದೆ. ಯುವತಿ ಎಂದು ತಿಳಿದು ಯುವಕನಿಗೆ ಮುಸ್ಲಿಂ ಹುಡುಗನೊಬ್ಬ ಅಶ್ಲೀಲ ಮೆಸೇಜ್ ಮಾಡಿ ನಗ್ನ ವಿಡಿಯೋ ಕರೆಗೆ ಒತ್ತಾಯಿಸಿದ ಹಿನ್ನೆಲೆ ಕಾಮುಕನಿಗೆ ಧರ್ಮದೇಟು ಕೊಡಲಾಗಿದೆ.

Advertisement

20 ವರ್ಷದ ಸವಾದ್ ಧರ್ಮದೇಟು ತಿಂದ ಆರೋಪಿ. ಸಾವದ್ ಅಂಗಡಿಯೊಂದರಲ್ಲಿ ವಸ್ತುವೊಂದನ್ನು ಖರೀದಿಸಿ ಹಣವಿಲ್ಲವೆಂದು ಗೂಗಲ್ ಪೇ ನಂಬರ್ ಕೇಳಿದ್ದ. ಅಂಗಡಿಯಲ್ಲಿದ್ದ ಹಿಂದೂ ಯುವತಿ ತನ್ನ ನಂಬರ್ ನೀಡದೇ, ಅಂಗಡಿಯ ಮತ್ತೋರ್ವ ಯುವಕನ ನಂಬರ್ ನೀಡಿದ್ದಳು.

ಆ ಫೋನ್ ನಂಬರ್ ಯುವತಿಯದ್ದೆಂದು ಭಾವಿಸಿ ರಾತ್ರಿ ವೇಳೆ ಸಾವದ್ ಅಶ್ಲೀಲ ಸಂದೇಶ ಕಳುಹಿಸಿದ್ದ. ಈ ವೇಳೆ ಸಹೊದ್ಯೋಗಿ ಯುವಕ ಎಲ್ಲಾ ಮೆಸೇಜ್‌ಗಳಿಗೂ ಉತ್ತರಿಸಿ ಆಟವಾಡಿಸಿದ್ದ. ತಡರಾತ್ರಿ ಅಶ್ಲೀಲ ವೀಡಿಯೋಗಳನ್ನು ಕಳುಹಿಸಿದ್ದ ಸವಾದ್, ಬಳಿಕ ಯುವತಿಗೆ ನಗ್ನ ವೀಡಿಯೋ ಕಾಲ್ ಮಾಡುವಂತೆ ಒತ್ತಾಯಿಸಿದ್ದ. ಅಲ್ಲದೇ ನಾಳೆ ಮತ್ತೆ ಅಂಗಡಿಯತ್ತ ಬರುತ್ತೇನೆ ಎಂಬ ಸಂದೇಶವನ್ನೂ ಸವಾದ್ ಕಳುಹಿಸಿದ್ದ.

ಮರುದಿನ ಯುವತಿಯನ್ನು ಭೇಟಿಯಾಗಲು ಐಸ್‌ಕ್ರೀಂ, ಚಾಕಲೇಟ್ ಹಿಡಿದುಕೊಂಡು ಬಂದಿದ್ದ ಸವಾದ್, ಅಂಗಡಿಗೆ ನುಗ್ಗಿ ಯುವತಿಯ ಬಳಿ ಮಾತನಾಡಲು ಮುಂದಾದಾಗ ಆಕೆ ಕಿರುಚಿದ್ದಾಳೆ. ಈ ವೇಳೆ ಮೊದಲೇ ತಯಾರಾಗಿ ನಿಂತಿದ್ದ ಹಿಂದೂ ಯುವಕರು ಸವಾದ್‌ಗೆ ಧರ್ಮದೇಟು ನೀಡಿ, ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here