ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿರಿಯರು ಬಳುವಳಿಯಾಗಿ ಯಾವುದನ್ನು ಕೊಟ್ಟರೂ ಅದೇ ಸಂಸ್ಕೃತಿಯಾಗಿದೆ. ಸಂಸ್ಕೃತಿ ಬೆಳೆಯುವುದು ಯುವ ಜನಾಂಗದಿಂದ. ಮರೆಯಾಗುವುದೂ ಯುವ ಜನಾಂಗದಿಂದಲೇ. ಆದ್ದರಿಂದ ಯುವ ಜನತೆ ಜಾಗೃತರಾಗಬೇಕು ಎಂದು ಯುವ ವಾಗ್ಮಿ ಅಮೋಘ ಹಿರೇಮಠ ಹೇಳಿದರು.
ಅವರು ತಾಲೂಕಿನ ರಾಮಗೇರಿ ಗ್ರಾಮದಲ್ಲಿ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಕಲಾ ಹಾಗೂ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಈ ಸಂಸ್ಕೃತಿಯನ್ನು ಇನ್ನೊಂದು ಪೀಳಿಗೆಗೆ ಯಥಾವತ್ತಾಗಿ ವರ್ಗಾಯಿಸುವ ಸಾಮರ್ಥ್ಯ ಮತ್ತು ಶಕ್ತಿ ಇರುವದು ಯುವಕರಲ್ಲಿ ಮಾತ್ರ. ಆದರೆ ಯುವಜನರು ಇನ್ನೊಂದು ದೇಶದ ಸಂಸ್ಕೃತಿಯತ್ತ ವಾಲುತ್ತಿರುವುದು ದುರದೃಷ್ಟಕರ. ಶಿಕ್ಷಣವೇ ಎಲ್ಲವನ್ನೂ ಬದಲಾವಣೆ ಮಾಡಬೇಕೆಂದರೆ ಅಸಾಧ್ಯ. ನಾವು ಕೂಡ ನಮ್ಮ ಮನೆಯಿಂದ, ನಮ್ಮಿಂದಲೇ ಬದಲಾವಣೆಯನ್ನು ಆರಂಭ ಮಾಡಬೇಕು, ಸಾಧ್ಯವಾದಷ್ಟು ನಮ್ಮ ಸಂಸ್ಕೃತಿಯನ್ನು ಉಳಿಸಿ ಪಾಲನೆ ಮಾಡಬೇಕಾದ್ದು ಯುವ ಜನರ ಕರ್ತವ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪನ್ಯಾಸಕ ಎಚ್.ಎನ್. ಕೆರೂರ, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಮಹತ್ವದ್ದಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ವಿಜಯಕುಮಾರ ಬಿಳಿಎಲೆ, ಗ್ರಾ.ಪಂ ಸದಸ್ಯೆ ಕಮಲವ್ವ ತುಂಬಣ್ಣವರ, ರಮೇಶ ಭೀಶೆಟ್ಟಿ, ಶರಣಬಸವ ಅಣ್ಣಿಗೇರಿ, ಪರಮೇಶ ತಡಹಾಳ, ಪ್ರಕಾಶ ಹರ್ಲಾಪುರ, ರವಿಕುಮಾರ ನೀರಲಗಿ, ಪೂಜಾ ಚಿಗರಿ, ಸಂಜೀವ ಬಾರಕೇರ, ಮಲ್ಲಿಕಾರ್ಜುನ ಶಿವಣ್ಣನವರ, ರೇವಂತ ಕ್ಷತ್ರಿಯ, ಸವಿತಾ ಪವಾಡೇಣ್ಣವರ, ನಿಂಗರಾಜ ಕುಂಬಾರ, ಶಂಕರ ಬಡಿಗೇರ, ಮಂಜುನಾಥ ಹುಲಗೂರ, ಕುಸುಮ ಶಿರಹಟ್ಟಿ ಇದ್ದರು. ವಿಶಾಲ ಕಟ್ಟಿಮನಿ, ಸೀತಾ ಲಮಾಣಿ ನಿರೂಪಿಸಿದರು.


