ರಾಮನಗರ: ಕೆರೆಗೆ ಬಿದ್ದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕನಕಪುರ ತಾಲೂಕಿನ ಕೂನೂರು ಗ್ರಾಮದಲ್ಲಿ ನಡೆದಿದೆ. ಕೂನೂರು ಗ್ರಾಮದ ನಿವಾಸಿ ಲಾವಣ್ಯ(17) ಮೃತ ಯುವತಿಯಾಗಿದ್ದು, ಮೊಬೈಲ್ ನೋಡುವ ವಿಷಯವಾಗಿ ತನ್ನ ಸಹೋದರಿಯೊಂದಿಗೆ ಜಗಳ ಮಾಡಿಕೊಂಡಿದ್ದ ಯುವತಿ,
ಅಜ್ಜಿ ಮನೆಗೆ ಹೋಗುವುದಾಗಿ ಹೇಳಿ ಬೇಸರದಿಂದ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೂ ಕನಕಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



