ಕಾರ್ಕಳದಲ್ಲಿ ಯುವತಿ ರೇಪ್ & ಮರ್ಡರ್ ಕೇಸ್: ಆರೋಪಿ ಪರ ವಾದ ಮಾಡಬೇಡಿ; ಸಮುದಾಯದ ವಕೀಲರಿಗೆ ಮುಸ್ಲಿಂ ಸಂಘಟನೆ ಕರೆ!

0
Spread the love

ಉಡುಪಿ:- ಹಿಂದೂ ಯುವತಿಗೆ ಡ್ರಗ್ಸ್ ನೀಡಿ ರೇಪ್ ಕೇಸ್ ಗೆ ಸಂಬಧಪಟ್ಟಂತೆ ಆರೋಪಿ ಪರ ಸಮುದಾಯದ ವಕೀಲರು ವಾದ ಮಾಡದಂತೆ ಮುಸ್ಲಿಂ ಸಂಘಟನೆ ಕರೆ ನೀಡಿದೆ.

Advertisement

ಘಟನೆಗೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಆಕ್ರೋಶ ಹೊರ ಹಾಕಿದೆ. ಶನಿವಾರ ಸಂಜೆ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಸದ್ಯ ಚೇತರಿಕೆ ಕಾಣುತ್ತಿದ್ದಾರೆ.

ಹಿಂದೂ ಸಹೋದರಿ ಅತ್ಯಾಚಾರ ಪ್ರಕರಣ ಖಂಡಿಸುತ್ತೇವೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಆಕ್ರೋಶ ಹೊರ ಹಾಕಿದೆ. ಯುವತಿಯನ್ನ ಕರೆದುಕೊಂಡು ಹೋಗಿ ಮದ್ಯದಲ್ಲಿ ಮಾದಕ ದ್ರವ್ಯ ಮಿಶ್ರಣ ಮಾಡಿ ಆಕೆಗೆ ಕುಡಿಸಿ ರೇಪ್ ಮಾಡಲಾಗಿದೆ.

ಅತ್ಯಾಚಾರ ಮಾಡುವಂತ ವಿಕೃತ ಮನಸ್ಸಿನ ಕಾಮುಕ ಅಲ್ತಾಫ್​ಗೆ ಕಠಿಣ ಶಿಕ್ಷೆಯಾಗಲಿ. ಕಾರ್ಕಳದಲ್ಲಿ ನಾವು ಸೌಹಾರ್ದತೆಯನ್ನ ಬಯಸುವವರು ಕಾರ್ಕಳಕ್ಕೆ ಸೌಹಾರ್ದತೆಯ ಇತಿಹಾಸವಿದೆ.

ಇದುವರೆಗೂ ಕಾರ್ಕಳದಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಬಂದಿದ್ದೇವೆ ಮುಂದೆಯೂ ಕಾಪಾಡಿಕೊಳ್ಳುತ್ತೇವೆ. ಹೊರ ಜಿಲ್ಲೆಯಿಂದ ಬಂದಂತಹ ಅಲ್ತಾಫ್ ನಂತ ವ್ಯಕ್ತಿಗಳು ಬಾಡಿಗೆ ಮನೆಯಲ್ಲಿ ಉಳಿದು ಇಂತಹ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾರೆ.

ಬಂಗ್ಲೆ ಗುಡ್ಡೆ ಪ್ರದೇಶದಲ್ಲಿ ಇಂತಹದೇ ಕೃತ್ಯ ಮಾಡಲು ಹೋಗಿ ಯುವಕರಿಂದ ಪೆಟ್ಟು ತಿಂದಾತ ಅಲ್ತಾಫ್. ಈ ಕೃತ್ಯ ಮಾನವ ಸಮುದಾಯಕ್ಕೆ ಮಾಡಿದಂತಹ ಅತ್ಯಾಚಾರ. ಕೇವಲ ಹಿಂದೂ ಸಮಾಜವಲ್ಲ ಪೂರ್ಣ ಸಮಾಜವೇ ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಪ್ರಕರಣದಲ್ಲಿ ಮಾದಕ ದ್ರವ್ಯದ ಉಪಯೋಗವಾಗಿದೆ ಉಡುಪಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ಸುಲಭದಲ್ಲಿ ಸಿಗುವಂತಿದೆ.

ಮಾದಕ ದ್ರವ್ಯ ಜಾಲದ ತಂಡವನ್ನ ಪತ್ತೆ ಹಚ್ಚಿ ಅವರಿಗೂ ಕಠಿಣ ಶಿಕ್ಷೆಯನ್ನು ನೀಡಬೇಕು. ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿಯನ್ನ ಪತ್ತೆ ಹಚ್ಚಿದ ಪೊಲೀಸ್ ಇಲಾಖೆಗೆ ಅಭಿನಂದನೆಗಳು. ನಾವು ನಮ್ಮ ಸಮುದಾಯದಿಂದಲೇ ಅಲ್ತಾಫ್ ನನ್ನು ಹೊರಗಿಡುವ ನಿರ್ಣಯವನ್ನು ಕೈಗೊಂಡಿದ್ದೇವೆ.

ಇಂತಹ ವ್ಯಕ್ತಿಗಳು ನಮ್ಮ ಸಮುದಾಯದಲ್ಲಿದ್ದರೆ ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು. ಇನ್ನು ನಮ್ಮ ಸಮುದಾಯದ ಯಾವುದೇ ವಕೀಲರು ಆರೋಪಿಯ ಪರವಾಗಿ ವಾದ ಮಾಡಬಾರದು ಇದು ನಮ್ಮ ಮನವಿ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮುಸ್ಲಿಂ ಜಿಲ್ಲಾ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್ ತಿಳಿಸಿದರು.


Spread the love

LEAVE A REPLY

Please enter your comment!
Please enter your name here