ಪಿಜಿಯೊಳಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಹತ್ಯೆ: ಸ್ನೇಹಿತನಿಂದಲೇ ಕೊಲೆ ಶಂಕೆ!?

0
Spread the love

ಬೆಂಗಳೂರು:- ಲೇಡಿಸ್ ಪಿಜಿಯೊಳಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ಜರುಗಿದೆ.

Advertisement

ಬಿಹಾರ ಮೂಲದ 24 ವರ್ಷದ ಕೃತಿ ಕುಮಾರಿ‌ ಮೃತ ಯುವತಿ. ಯುವತಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಹಾಗೂ ಕೋರಮಂಗಲದ ವಿಆರ್ ಲೇಔಟ್ ಪಿಜಿ ನಲ್ಲಿ ವಾಸವಿದ್ದ ವೇಳೆ ಕೃತ್ಯ ನಡೆದಿದೆ.

ರಾತ್ರಿ 11.10 ರಿಂದ 11.30 ಸುಮಾರಿಗೆ ಹತ್ಯೆ ನಡೆದಿದೆ 11.10 ಕ್ಕೆ ಲೇಡಿಸ್ ಪಿಜಿಯೊಳಗೆ ಯುವಕ ಬಂದಿದ್ದಾನೆ. ಚಾಕುವಿನ ಜೊತೆಗೆ ಯುವಕ ಆಗಮಿಸಿದ್ದ. ಮೂರನೇ ಮಹಡಿಯಲ್ಲಿರುವ ರೂಂ ಸಮೀಪ ಚಾಕುವಿನಿಂದ ಹಲ್ಲೆ ನಡೆದಿದೆ. ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ.

ಸ್ಥಳದಲ್ಲಿಯೇ ಕೃತಿ ಕುಮಾರಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ಮಾಡಿದ್ದಾರೆ.

ಪರಿಚಯಸ್ಥ ಯುವಕನಿಂದಲೇ ಕೃತ್ಯ ಶಂಕೆ ವ್ಯಕ್ತವಾಗಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here