ಬೆಂಗಳೂರು:- ಇತ್ತೀಚೆಗೆ ನಗರದಲ್ಲಿ ಪುಂಡರ ಹಾವಳಿ ಮಿತಿ ಮೀರಿದೆ. ಅದರಂತೆ ಕೆಲವು ದಿನಗಳ ಹಿಂದೆ ಆಟೋದಲ್ಲಿ ತೆರಳುತ್ತಿದ್ದ ಇಬ್ಬರು ಯುವತಿಯರಿಗೆ ಪುಂಡರಿಬ್ಬರು ಚುಡಾಯಿಸಿ ಕಿರುಕುಳ ಕೊಟ್ಟಿದ್ದರು. ಅಲ್ಲದೇ ಇದನ್ನು ಪ್ರಶ್ನಿಸಿದ ಯುವತಿಯರ ತಾಯಿಗೂ ಅವಾಚ್ಯ ಪದಬಳಸಿ ನಿಂದಿಸಿದರು.
ಘಟನೆ ಸಂಬಂಧ ಯುವತಿಯರ ತಾಯಿ ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ಕೊಟ್ಟಿದ್ದರು. ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ಇದೀಗ ಇಬ್ಬರನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮುಬಾರಕ್ ಮತ್ತು ಹಫೀಫ್ ಬಂಧಿತರು.
ಘಟನೆ ನಡೆದದ್ದು ಯಾವಾಗ!?
ಏಪ್ರಿಲ್ 23 ರಂದು ಸಾರಕ್ಕಿ ಮಾರುಕಟ್ಟೆ ಬಳಿ ಬೈಕ್ ನಲ್ಲಿ ಬಂದ ಇಬ್ಬರು ಪುಂಡರು, ಆಟೋ ಅಡ್ಡಗಟ್ಟಿ ಯುವತಿಯರನ್ನು ಚುಡಾಯಿಸಿದ್ದರು. ಇದನ್ನು ಪ್ರಶ್ನಿಸಿದ್ದ ಯುವತಿಯರ ತಾಯಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನ ಮಾಡಿದ್ದರು. ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ FIR ದಾಖಲಾಗಿತ್ತು.



