ವೀಳ್ಯದೆಲೆಯ ಆರೋಗ್ಯ ಪ್ರಯೋಜನಗಳು ತಿಳಿದ್ರೆ ಶಾಕ್ ಆಗೋದು ಗ್ಯಾರಂಟಿ!‌

0
Spread the love

ನಾವು ವೀಳ್ಯದೆಲೆಯನ್ನ ಪೂಜೆ ಮಾಡಲು ಹಾಗೂ ತಿನ್ನಲು ಬಳಸುತ್ತೇವೆ. ವೀಳ್ಯದೆಲೆ ಔಷಧೀಯ ಗುಣಗಳನ್ನು ಹೊಂದಿದೆ. ಮಧುಮೇಹವನ್ನು ನಿಯಂತ್ರಿಸುವುದರಿಂದ ಹಿಡಿದು ಒತ್ತಡವನ್ನು ಕಡಿಮೆ ಮಾಡುವವರೆಗೆ, ಈ ಎಲೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ, ಜೊತೆಗೆ ನಿಮ್ಮ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.

Advertisement

ಸಂಧಿವಾತ ಕಡಿಮೆಗೊಳಿಸುತ್ತದೆ
ವೀಳ್ಯದೆಲೆಯಲ್ಲಿರುವ ಉರಿಯೂತ ನಿವಾರಕ ಗುಣಗಳು ಸಂಧಿವಾತವನ್ನು ಶೀಘ್ರವೇ ಗುಣಪಡಿಸಲು ನೆರವಾಗುತ್ತವೆ. ಇದಕ್ಕಾಗಿ ಕೆಲವು ಎಲೆಗಳನ್ನು ಅರೆದು ರಸವನ್ನು ಹಿಂಡಿ ಈ ರಸವನ್ನು ನೋವಿರುವ ಭಾಗಕ್ಕೆ ಹಚ್ಚಬೇಕು. ಹಚ್ಚಿದ ಬಳಕ ಸಾಧ್ಯವಾದಷ್ಟು ಹೊತ್ತು ಹಾಗೇ ಇರಿಸಿ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು.

ಅಜೀರ್ಣತೆಯನ್ನು ಇಲ್ಲವಾಗಿಸುತ್ತದೆ
ಅಜೀರ್ಣತೆಯಿಂದ ಎದುರಾಗುವ ಹಲವಾರು ಬಗೆಯ ತೊಂದರೆಗಳಿಗೆ ವೀಳ್ಯದೆಲೆಯಲ್ಲಿರುವ ಪೋಷಕಾಂಶಗಳು ಪರಿಹಾರ ಒದಗಿಸುತ್ತವೆ. ವೀಳ್ಯದೆಲೆಯಲ್ಲಿ ಅಪಾನವಾಯು ನಿರೋಧಕ ಗುಣವಿದ್ದು ಆಹಾರ ಜೀರ್ಣವಾದ ಬಳಿಕ ವಾಯು ಉತ್ಪನ್ನವಾಗುವುದನ್ನು ನಿಗ್ರಹಿಸುತ್ತದೆ. ಅಲ್ಲದೇ ಜೀರ್ಣಕ್ರಿಯೆಯಲ್ಲಿ ಉತ್ಪನ್ನವಾಗುವ ಆಮ್ಲೀಯತೆಯನ್ನು ನಿವಾರಿಸುವ ಹಾಗೂ ಗುಣಪಡಿಸುವ ಗುಣಗಳಿದ್ದು ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ ಹಾಗೂ ಅಜೀರ್ಣತೆಯಾಗದಂತೆ ತಡೆಯುತ್ತದೆ.

ಬಾಯಿಯ ದುರ್ವಾಸನೆ ಇಲ್ಲವಾಗಿಸಲು
ಇದರಲ್ಲಿರುವ ಉರಿಯೂತ ನಿವಾರಕ ಗುಣಗಳ ಹೊರತಾಗಿ ವೀಳ್ಯದೆಲೆಯಲ್ಲಿ ಅತಿಸೂಕ್ಷ್ಮಕ್ರಿಮಿ ನಿವಾರಕ ಗುಣಗಳೂ ಇವೆ. ಈ ಗುಣ ಬಾಯಿಯಲ್ಲಿ ಆಶ್ರಯ ಪಡೆದಿದ್ದ ಕ್ರಿಮಿಗಳನ್ನು ಕೊಂದು ನಿವಾರಿಸಿ ಇವುಗಳಿಂದ ಹೊಮ್ಮುವ ದುರ್ವಾಸನೆಯಿಂದ ರಕ್ಷಿಸುತ್ತದೆ. ಅಲ್ಲದೇ ಬಾಯಿಯಲ್ಲಿ ಪಿ ಎಚ್ ಮಟ್ಟ ಆರೋಗ್ಯಕರ ಮಟ್ಟದಲ್ಲಿರುವಂತೆ ನೋಡಿಕೊಳ್ಳುವ ಮೂಲಕ ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ.

ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿ
ವೀಳ್ಯದೆಲೆಯಲ್ಲಿ ಮಧುಮೇಹಿ ವಿರೋಧಿಯಾಗಿರುವಂತಹ ಟ್ಯಾನಿನ್ ಎನ್ನುವ ಅಂಶವಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು. ಕರುಳಿನಲ್ಲಿ ಗ್ಲೂಕೋಸ್ ಹೀರುವಿಕೆಯನ್ನು ಪ್ರತಿಬಂಧಿಸುವ ಮೂಲಕ ವೀಳ್ಯದೆಲೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತಗ್ಗಿಸುವುದು. ಇದರಲ್ಲಿ ಇರುವಂತಹ ಫಾಲಿಪೆನಾಲ್ ಮೇಧೋಜೀರಕ ಗ್ರಂಥಿಯ ಕೋಶಕ್ಕೆ ಫ್ರೀ ರ್ಯಾಡಿಕಲ್‍‌ನಿಂದ ಹಾನಿಯಾಗದಂತೆ ತಡೆಯುವುದು.

ತೂಕ ಇಳಿಕೆಗೆ ನೆರವಾಗುತ್ತದೆ
ವೀಳ್ಯದೆಲೆಯಲ್ಲಿರುವ ಕರಗುವ ನಾರು ಆಹಾರವನ್ನು ಜೀರ್ಣಿಸಲು ನೆರವಾಗುವ ಜೊತೆಗೇ ತೂಕ ಇಳಿಕೆಗೂ ನೆರವಾಗುತ್ತದೆ. ನಿತ್ಯವೂ ವೀಳ್ಯದೆಲೆಯೊಂದನ್ನು ಸೇವಿಸುವ ಮೂಲಕ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ನಿಃಶಕ್ತಿಯಾಗುವುದನ್ನು ತಡೆಯುತ್ತದೆ. ಇದರ ರಸಗಳು ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ಜೀರ್ಣರಸಗಳು ಹೆಚ್ಚಾಗಿ ಸ್ರವಿಸುವಂತೆ ಮಾಡುತ್ತದೆ ಹಾಗೂ ಜೀರ್ಣಕ್ರಿಯೆ ಉತ್ತಮವಾಗಿ ನಡೆದು ದೇಹದಿಂದ ಕಲ್ಮಶಗಳು ನಿವಾರಣೆಯಾಗುತ್ತವೆ. ಜೀರ್ಣಕ್ರಿಯೆ ಉತ್ತಮವಾಗಿದ್ದರೆ ಉಳಿದೆಲ್ಲಾ ಕೆಲಸಗಳೂ ಉತ್ತಮವಾಗಿರುತ್ತವೆ.

 

 


Spread the love

LEAVE A REPLY

Please enter your comment!
Please enter your name here