ಎಣ್ಣೆ ಕೊಡದ ವಿಚಾರಕ್ಕೆ ಕಿರಿಕ್: ಬಾರ್ ಕ್ಯಾಶಿಯರ್ ಮೇಲೆ ಯೂತ್ ಕಾಂಗ್ರೆಸ್ ಅಧ್ಯಕ್ಷನಿಂದ ಹಲ್ಲೆ!

0
Spread the love

ಚಿಕ್ಕಮಗಳೂರು:- ಎಣ್ಣೆ ಕೊಡದ ವಿಚಾರಕ್ಕೆ ಕಿರಿಕ್ ನಡೆದು ಬಾರ್ ಕ್ಯಾಶಿಯರ್ ಮೇಲೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಹಲ್ಲೆ ನಡೆಸಿರುವ ಘಟನೆ ಕೊಪ್ಪ ಪಟ್ಟಣದಲ್ಲಿ ಜರುಗಿದೆ.

Advertisement

ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ್ ನಿಂದ ಈ ಕೃತ್ಯ ನಡೆದಿದೆ. ಶನಿವಾರ ಮಧ್ಯರಾತ್ರಿ ವಿಜಯಾನಂದ್ ಅವರು, ಶ್ರೀಗಂಧ ಬಾರ್​ಗೆ ಬಂದು ಎಣ್ಣೆ ಕೇಳಿದ್ದಾರೆ. ಕ್ಯಾಶಿಯರ್ ಎಣ್ಣೆ ಕೊಡಲು ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಭಾನುವಾರ ಬೆಳಗ್ಗೆ ತನ್ನ ಪಟಾಲಂ ಜೊತೆ ಬಂದ ವಿಜಯಾನಂದ್​ ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವ ದೃಶ್ಯ ಬಾರ್ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಲ್ಲದೇ, ಶ್ರೀಗಂಧ ಬಾರ್​ ಕಾಂಗ್ರೆಸ್ ಮುಖಂಡ ಸುರೇಶ್ ಎಂಬುವವರಿಗೆ ಸೇರಿದೆ. ಇಷ್ಟೆಲ್ಲಾ ಗಲಾಟೆ ಹಲ್ಲೆ ನಡೆದಿದ್ದರೂ ಯೂತ್ ಕಾಂಗ್ರೆಸ್ ಅಧ್ಯಕ್ಷನ ಪರ ಬಾರ್ ಮಾಲೀಕ ನಿಂತಿದ್ದು, ಪೊಲೀಸ್ ‌ಠಾಣೆಯಲ್ಲಿ ದೂರು ನೀಡದೆ ರಾಜಿ ಪಂಚಾಯಿತಿ ನಡೆಸಿದರು.

ಬಾರ್​​ನಲ್ಲಿ ವಿಜಯಾನಂದ್​ ಮತ್ತು ಆತನ ಪಟಾಲಂ ನಡೆಸಿದ ಗುಂಡಾಗಿರಿ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ಚಿಕ್ಕಮಗಳೂರು ಎಸ್​ಪಿ ವಿಕ್ರಮ್ ಅಮಟೆ ಸೂಚನೆ ಮೇರೆಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ್​ ಸೇರಿದಂತೆ ಏಳು ಜನರ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲು ಮಾಡಲಾಗಿದೆ. ಹಲ್ಲೆಗೊಳಗಾದ ಕ್ಯಾಶಿಯರ್‌ಗೆ ಕೆಲಸಕ್ಕೆ ರಜೆ ನೀಡಲಾಗಿದ್ದು, ಹಲ್ಲೆ ಮಾಡಿದ ವಿಜಯಾನಂದ್​ ಆ್ಯಂಡ್​ ಟೀಮ್ ಬಂಧನ ಭೀತಿಯಿಂದ ಪರಾರಿಯಾಗಿದೆ.


Spread the love

LEAVE A REPLY

Please enter your comment!
Please enter your name here