ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜ ಸಂಘಟನೆಯಲ್ಲಿ ಯುವ ಸಮುದಾಯದ ಪಾತ್ರ ಬಹಳ ಮುಖ್ಯವಾಗಿರುವದರಿಂದ ಯುವಕರು ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಬೇಕು ಎಂದು ಯುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.
ನಗರದ ರಾಯಲ್ ವಿಲ್ಲಾದಲ್ಲಿ ಜಿಲ್ಲಾ ಕುರುಬ ಸಮಾಜದ ಯುವ ಬಳಗದ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ, ಭಾರತ ಸರಕಾರದ ಆಹಾರ ನಿಗಮದ ರಾಜ್ಯ ನಿರ್ದೇಶಕ ರವಿ ದಂಡಿನ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಕಲ್ಲೂರ, ನೌಕರರ ಸಂಘದ ಜಿಲ್ಲಾ ಖಜಾಂಚಿ ಎಂ.ಎಂ. ನಿಟ್ಟಾಲಿ, ಡಿ.ಎಸ್. ದುರ್ಗಣ್ಣವರ ಅವರುಗಳನ್ನು ಸನ್ಮಾನಿಸಲಾಯಿತು.
ಸಮಾಜದ ಯುವ ಮುಖಂಡರಾದ ಹೇಮಂತ ಗಿಡ್ಡಹನುಮಣ್ಣವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ರೂವಾರಿ ಹಾಗೂ ಕುರಿಗಾರರ ಸಹಕಾರಿ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಜುನಾಥ ಜಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಗ ತಾಲೂಕಿನ ವಿವಿಧ ಗ್ರಾಮಗಳಿಂದ 25ಕ್ಕೂ ಹೆಚ್ಚು ಗ್ರಾಮ ಘಟಕದ ಪದಾಧಿಕಾರಿಗಳು, ಜಿಲ್ಲಾ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಕೃಷ್ಣಗೌಡ ಪಾಟೀಲರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಮುತ್ತಣ್ಣ ಶಿವಳ್ಳಿ, ಯುವ ಬಳಗದ ನಿರ್ದೇಶಕ ರವಿ ವಗ್ಗನವರ, ಮಂಜುನಾಥ ಕುರಿ, ರಮೇಶ ಮಕಾಳಿ, ಪರುಶುರಾಮ ಜಡಿ, ರಮೇಶ ಹಂಡಿ, ಮಂಜುನಾಥ ನಾಗಾವಿ, ಮಹೇಶ ನೀಲಗುಂದ, ಬಸವರಾಜ ಶೇಲೆಯಪ್ಪನವರ, ಮಲ್ಲು ಇಂಗಳಳ್ಳಿ, ಲಕ್ಷ್ಮಣ ಜಂತ್ಲಿ, ವಿನಾಯಕ ಆಲೂರು, ರವಿ ಕೌವಡಕಿ, ಅಜ್ಜಪ್ಪ ಹೆಗ್ಗಣವರ, ರಾಜು ಕುರಿ, ರವಿ ಮಳವಾಡ, ರವಿ ಹದ್ಲಿ, ಬೀರೇಶ ಪೂಜಾರಿ, ಕಲ್ಮೇಶ ಹನುಮಣ್ಣವರ, ಮಂಜು ಪೂಜಾರಿ, ಸಚಿನ ಮೆಣಸಗಿ, ರಮೇಶ ಗೋಡಿ, ಸುನೀಲ್ ಜಡಿ, ಮಹೇಶ ಹುಡೇದ, ಕರಿಯಪ್ಪ ಗೌಡರ, ಗ್ರಾ.ಪಂ ಉಪಾಧ್ಯಕ್ಷ ಸಂತೋಷ ಮುತಾಳ, ರಫೀಕ್ ಮುಲ್ಲಾನವರ, ರಾಜು ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಯುವಕರ ಶಕ್ತಿ, ಗುರು-ಹಿರಿಯರ ಮಾರ್ಗದರ್ಶನ ಸಮ್ಮಿಲನಗೊಂಡರೆ ಅಸಾಧ್ಯವಾದ ಕೆಲಸ ಯಾವುದೂ ಇಲ್ಲ. ನಮ್ಮ ಕುಟುಂಬದ ಮೇಲೆ ಹಾಲುಮತ ಸಮಾಜದ ಕೊಡುಗೆ ಸಾಕಷ್ಟು ಇರುವದರಿಂದ ನಾನೂ ಕೂಡ ಹಾಲುಮತ ಸಮಾಜದ ಅಭಿವೃದ್ಧಿಗಾಗಿ ಸಹಾಯ, ಸಹಕಾರ ನೀಡಲು ಸದಾ ಸಿದ್ಧ.
– ಕೃಷ್ಣಗೌಡ ಪಾಟೀಲ.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರು.