ಚಿಕ್ಕಮಗಳೂರು: ಸುಧೀರ್ ಅತ್ತಾವರ ನಿರ್ದೇಶನದಲ್ಲಿ ʼಕೊರಗಜ್ಜʼ ಸಿನಿಮಾದ ಹಾಡಿನ ಶೂಟಿಂಗ್ ಸಂದರ್ಭದಲ್ಲಿ ದೈವಾರಾಧನೆ ಮಾಡುವ ಸಮುದಾಯದಿಂದ ದಾಂಧಲೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಘಟನೆ ಬಗ್ಗೆ ನಿರ್ದೇಶಕ ಸುಧೀರ್ ಅತ್ತಾವರ ಹೇಳಿಕೆ ನೀಡಿದ್ದಾರೆ. ಮನಸ್ಸಿಗೆ ಅತ್ಯಂತ ನೋವು ಉಂಟು ಮಾಡಿದ ಘಟನೆ.
Advertisement
ಯಾವುದೋ ಉದ್ದೇಶದಿಂದ ಯುವಕರು ಅಸಭ್ಯ ವರ್ತನೆ ಮಾಡಿದ್ರು. ಇದರಿಂದ ಚಿತ್ರಿಕರಣವನ್ನೇ ನಿಲ್ಲಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಯಿತು. ಹಾಡಿನ ಚಿತ್ರೀಕರಣಕ್ಕಾಗಿ 50 ಜನ ಕಲಾವಿದರು, ಖ್ಯಾತ ಕೊರಿಯೋಗ್ರಾಫರ್ ಗಣೇಶ ಆಚಾರ್ಯ ಕೂಡ ಇದ್ದರು. ಬಿಜೆಪಿ ಪಕ್ಷದ ಸಾಗರ ಘಟಕವೆಂದು ಹೇಳಿಕೊಂಡು ಕೆಲ ಯುವಕರು ಅಸಭ್ಯ ವರ್ತನೆ ಮಾಡಿದ್ರು ಎಂದಿದ್ದಾರೆ.