ಬಾಪೂಜಿ ಶಾಲೆಯಲ್ಲಿ ಯುವ ಸಂಸತ್ ರಚನೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಲಕ್ಕುಂಡಿ ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ವಿದ್ಯಾರ್ಥಿ ಯುವ ಸಂಸತ್ ರಚನೆ ಮಾಡಲಾಯಿತು.

Advertisement

ಆಕಾಶ ಕುಂಟೋಜಿ ಪ್ರಧಾನ ಮಂತ್ರಿ, ವಂದನಾ ಭೋಸಲೆ ಉಪ ಪ್ರಧಾನಿ, ರಂಗನಗೌಡ ಪಾಟೀಲ ಶಿಕ್ಷಣ ಮಂತ್ರಿ, ಪ್ರತೀಕ್ಷಾ ಕಲ್ಲೂರ ಉಪ ಶಿಕ್ಷಣ ಮಂತ್ರಿ, ಶ್ರೀನಿಧಿ ಕಲಬಂಡಿ ಉನ್ನತ ಶಿಕ್ಷಣ, ಮಣಿಕಂಠ ಗರ್ಜಪ್ಪನವರ ಹಣಕಾಸು, ಮಧು ಪೂಜಾರ ಆರೋಗ್ಯ, ಅರ್ಫಾ ಯರಗುಡಿ ಆಹಾರ, ಮಹಮ್ಮದ ಅಬಜಾನ್ ಮಕಾನದಾರ ಕ್ರೀಡೆ, ಸೂಫಿಯಾನ ನಮಾಜಿ ರಕ್ಷಣಾ, ಶ್ರೀದೇವಿ ಗರ್ಜಪ್ಪನವರ ನೀರಾವರಿ, ಗಗನ ಕಿಲ್ಲೆದ ವಾರ್ತಾ, ದಾವಲಸಾಬ ಈಟಿ ಸ್ವಚ್ಛತೆ, ಸಾನಿಯಾ ತಹಸೀಲ್ದಾರ ಕಾನೂನು, ಶ್ರೀದೇವಿ ಚಿತ್ತಾರಿ ಗ್ರಂಥಾಲಯ, ರೋಷನಜಮೀರ್ ಮಕಾನದಾರ ತೋಟಗಾರಿಕೆ, ವರ್ಷಾ ಬೇಲೇರಿ ಅಭಿವೃದ್ಧಿ, ಆದಿಲಸಾಬ ಓಲೇಕಾರ ಪ್ರಾರ್ಥನಾ, ಮಾಜ ತಹಸೀಲ್ದಾರ ವಿರೋಧಪಕ್ಷದ ನಾಯಕರಾಗಿ ಆಯ್ಕೆಯಾದರು.

1ನೇ ತರಗತಿಗೆ ಶ್ರೀನಿಧಿ ಮುನವಳ್ಳಿಮಠ, ಅನಿಷಾ ಶಲವಡಿ, 2ನೇ ತರಗತಿಗೆ ತರುಣ ನಿಡಗುಂದಿ, ಸುಮಂತ ಕುಂಬಾರ, 3ನೇ ತರಗತಿಗೆ ವಿಜಯ ನೋಟಗಾರ, ಶರತಗೌಡ ಗೌಡ್ರ, 4ನೇ ತರಗತಿಗೆ ಕೃತಿಕಾ ನೂಕಾಪೂರ, ಯಾಸೀರ ಯರಗುಡಿ, 5ನೇ ತರಗತಿಗೆ ಸಮರ್ಥ ಗರ್ಜಪ್ಪನವರ, ಚೈತ್ರಾ ಸೋಮನಕಟ್ಟಿ ಮತದಾನದ ಮೂಲಕ ತರಗತಿಗಳ ಪ್ರತಿನಿಧಿಯಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಶಾಲಾ ಪ್ರಧಾನ ಗುರುಗಳಾದ ಆರ್.ಬಿ. ಬರದ್ವಾಡ, ಹಿರಿಯ ಶಿಕ್ಷಕ ಬಸವರಾಜ ಗರ್ಜಪ್ಪನವರ, ಎಫ್.ಬಿ. ಬರದ್ವಾಡ, ಅರ್ಜುನ ಚಲವಾದಿ, ಎ.ಎಂ. ದಂಡಿನ, ಆಸ್ಮಾ ಕನವಳ್ಳಿ, ಲಕ್ಷ್ಮೀ ಗರ್ಜಪ್ಪನವರ ಇದ್ದರು. ಆಯ್ಕೆಯಾದ ಮಕ್ಕಳಿಗೆ ರಫೀಯಾ ದಂಡಿನ ಪ್ರಮಾಣವಚನ ಬೋಧಿಸಿದರು.


Spread the love

LEAVE A REPLY

Please enter your comment!
Please enter your name here