ಯುವಕರು ರಂಗ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: `ನಾಟಕ’ ಸಾಹಿತ್ಯದ ಮಹತ್ವದ ಪ್ರಕಾರವಾಗಿದ್ದು, ಅಭಿನಯದ ಮೂಲಕ ಪ್ರೇಕ್ಷಕರಲ್ಲಿ ಒಳನೋಟವನ್ನು ಮೂಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ರಂಗಭೂಮಿಯ ಪ್ರಾಮುಖ್ಯತೆ ಕ್ಷೀಣಿಸುತ್ತಿದ್ದು, ಯುವಜನರು ಈ ಚಟುವಟಿಕೆಗಳಲ್ಲಿ ತೊಡುಗುವಂತೆ ಮಾಡುವ ಅನಿವಾರ್ಯ ಉಂಟಾಗಿದೆ ಎಂದು ಪ್ರೊ. ಅನ್ನದಾನಿ ಹಿರೇಮಠ ತಿಳಿಸಿದರು.

Advertisement

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಇವರ ಸಹಯೋಗದಲ್ಲಿ ಗದುಗಿನ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಜರುಗಿದ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಆಧುನಿಕ ರಂಗಭೂಮಿ ಕುರಿತು ಉಪನ್ಯಾಸ ನೀಡಿದ ರಂಗ ನಿರ್ದೇಶಕ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ, ರಂಗಭೂಮಿಯಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಪ್ರೇಕ್ಷಕರನ್ನು ಸೆಳೆಯುವ ಕಾರ್ಯವನ್ನು ಮಾಡಬೇಕಾಗಿದೆ. ಯುವಜನಾಂಗಕ್ಕೆ ಶಿಬಿರಗಳನ್ನು ಸಂಘಟಿಸಿ ಆಸಕ್ತಿ ಬೆಳೆಸಬೇಕೆಂದು ತಿಳಿಸಿದರು.

ಚಿನ್ಮಯ ಕಲಾಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ರಂಗಭೂಮಿ ಕಲಾವಿದ ವಿಜಯಕುಮಾರ ಜಿತೂರಿ, ಇಂದಿನ ಯುವಪೀಳಿಗೆ ರಂಗಭೂಮಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ರಂಗಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ರಂಗ ಕಲಾವಿದೆ ಕವಿತಾ ಕಾಶಪ್ಪನವರ, ಬದುಕಿನ ಮೌಲ್ಯಗಳನ್ನು ತಿಳಿಸಲು ನಾಟಕಗಳು ಪರಿಣಾಮಕಾರಿ ಮಾಧ್ಯಮವಾಗಿದೆ. ಕುಟುಂಬ ಮತ್ತು ಸಮಾಜದಲ್ಲಿ ಪ್ರೋತ್ಸಾಹ ದೊರೆತಾಗ ಮಾತ್ರ ಮಹಿಳೆಯರು ಅಭಿನಯ ಕಲೆಯಲ್ಲಿ ತೊಡಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಮೌನೇಶ ಬಡಿಗೇರ ಮಾತನಾಡಿ, ರಂಗಕಲೆಯಲ್ಲಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ ದಶಕದಿಂದ ಕಲಾವಿದರಿಗೆ ಪ್ರಶಸ್ತಿ-ಪುರಸ್ಕಾರಗಳನ್ನು ನೀಡುತ್ತಾ ಬಂದಿದ್ದೇವೆ. ಗದುಗಿನ ರಂಗ ಪರಿಸರವನ್ನು ಇನ್ನಷ್ಟು ಸುಂದರಗೊಳಿಸುವ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಅಕಾಡೆಮಿ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆ.ಎಚ್. ಬೇಲೂರ, ಡಾ. ರಾಜಶೇಖರ ದಾನರಡ್ಡಿ, ಬಸವರಾಜ ನೆಲಜೇರಿ, ತುಕಾರಾಮ ಪಾಂಡ್ರೆ, ರಾಜಶೇಖರ ಪಾಟೀಲ, ಮುರಳಿಧರ ಸಂಕನೂರ, ಶ್ಯಾಮಸುಂದರ ಕುಲಕರ್ಣಿ, ಬಸವರಾಜ ವಾರಿ, ಡಾ. ಬಿ.ಬಿ. ಹೊಳಗುಂದಿ, ಶಶಿಧರ ರೇಷ್ಮೆ, ಅನಂತಮೋಹನ ಭಟ್, ಮಾಲತೇಶಗೌಡ ಪಾಟೀಲ, ಕಾಶೀನಾಥಸಾ ಜಿತೂರಿ, ರಂಗಪ್ಪ ಹುಯಿಲಗೋಳ, ಶಿವು ಭಜಂತ್ರಿ, ಬಾಹುಬಲಿ ಜೈನರ್, ಅಶೋಕ ಗಿರಡ್ಡಿ, ಮಲ್ಲಪ್ಪಡೋಣಿ, ಯಲ್ಲಪ್ಪ ಹಂದ್ರಾಳ, ಶಕುಂತಲಾ ಸಿಂಧೂರ, ರೂಪಾಜಿತೂರಿ, ರಾಜೇಶ್ವರಿ ಬಡ್ನಿ, ಸಿ.ಎಂ. ಮಾರನಬಸರಿ, ಅನಸೂಯಾ ಮಿಟ್ಟಿ, ಶುಭಾಂಗಿ ದ್ಯಾಮೇನಹಳ್ಳಿ, ಷಡಕ್ಷರಿ ಮೆಣಸಿನಕಾಯಿ, ಶೈಲಶ್ರೀ ಕಪ್ಪರದ, ಎಚ್.ಟಿ. ಸಂಜೀವಸ್ವಾಮಿ, ಬಿ.ಎಸ್. ಹಿಂಡಿ, ಅಮರೇಶರಾಂಪೂರ, ಕೆ.ಜಿ. ವ್ಯಾಪಾರಿ, ಪ್ರ.ತೋ. ನಾರಾಯಣಪೂರ, ದಿಲೀಪಕುಮಾರ ಮುಗಳಿ, ಶಶಿಕಾಂತ ಕೊರ್ಲಹಳ್ಳಿ, ಜಿ.ಎ. ಪಾಟೀಲ, ಶರಣಪ್ಪ ಹೊಸಂಗಡಿ, ಶಾರದಾಕಾತರಕಿ, ಸುಧಾ ಬಳ್ಳಿ, ಪ್ರಶಾಂತ ಪಾಟೀಲ, ಅಮೃತಾ ಚನ್ನಪಗೌಡರ, ಸತೀಶ ಚನ್ನಪ್ಪಗೌಡರ, ಅಮರೇಶ ರಾಂಪೂರ, ಚನವೀರಪ್ಪ ದುಂದೂರ, ಎಸ್.ಸಿ. ಹಾಲಕೇರಿ, ರತ್ನಾ ಪುರಂತರ, ಆರ್.ಡಿ. ಕಪ್ಪಲಿ ಮೊದಲಾದವರು ಉಪಸ್ಥಿತರಿದ್ದರು.

ಡಿ.ಎಸ್. ಬಾಪುರಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಸತೀಶ ಚನ್ನಪ್ಪಗೌಡ್ರ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯ ತವರೂರು ಗದುಗಿನ ಪರಿಸರವಾಗಿದೆ. ರಂಗ ಚಟುವಟಿಕೆಗಳು ನಿರಂತರವಾಗಿ ಜರುಗುವ ಹಿನ್ನೆಲೆಯಲ್ಲಿ ಇಲ್ಲಿಯ ಎಲ್ಲ ಕಲಾ ಸಂಘಟನೆಗಳು ಒಗ್ಗೂಡಿ ಕಾರ್ಯ ಮಾಡಬೇಕು. ಮಕ್ಕಳಿಗೆ ರಂಗಕಲೆಯನ್ನು ಕಲಿಸಿಕೊಡುವ ಮೂಲಕ ಹೊಸ ತಲೆಮಾರಿನ ಸೃಷ್ಟಿಯಾಗಬೇಕೆಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here