ವಿಜಯಸಾಕ್ಷಿ ಸುದ್ದಿ, ಗದಗ: ಜನಸೇವೆ ಮಾಡುವ ಉದ್ದೇಶದೊಂದಿಗೆ ಸುಭಾಸ ಲಮಾಣಿಯವರ ಅಧ್ಯಕ್ಷತೆಯಲ್ಲಿ ಶ್ರೀನಿವಾಸ ಸೇವಾ ಪ್ರತಿಷ್ಠಾನ ಪ್ರಾರಂಭಿಸಿರುವುದು ಶ್ಲಾಘನೀಯ. ಈ ಪ್ರತಿಷ್ಠಾನಕ್ಕೆ ಸಮಾಜದ ಯುವಕರು ಕೈ ಜೋಡಿಸಿ ಸಮಾಜಪರ ಕೆಲಸ ಮಾಡಬೇಕು. ಅಲ್ಲದೇ ವೈಯಕ್ತಿಕವಾಗಿ ನಾನು ಸಹ ಈ ಪ್ರತಿಷ್ಠಾನದ ಜೊತೆ ಸದಾ ಇರುವುದಾಗಿ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.
ನಗರದ ಐಎಂಎ ಹಾಲ್‌ನಲ್ಲಿ ಶ್ರೀನಿವಾಸ ಸೇವಾ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭ ಹಾಗೂ ಶ್ರೀ ಸಂತ ಸೇವಾಲಾಲರ 286ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಜಿ.ಬಿ. ಬಿಡನಾಳ ಮಾತನಾಡಿ, ನಾನು ಗ್ರಾಮೀಣ ಪ್ರದೇಶದ ಬಡಕುಟುಂಬದಲ್ಲಿ ಬೆಳೆದು ಬಂಜಾರ ಸಮುದಾಯದವರೊಂದಿಗೆ ನಿಕಟ ಸಂಬಂಧ ಹೊಂದಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಸುಭಾಸ ಲಮಾಣಿ ಹಾಗೂ ಕಾರ್ಯದರ್ಶಿ ಶಶಿಕಲಾ ಎಸ್.ಲಮಾಣಿಯವರನ್ನು ವೇದಿಕೆಯಲ್ಲಿದ್ದ ಎಲ್ಲ ಗಣ್ಯ ಮಾನ್ಯರು ಸನ್ಮಾನಿಸಿ ಗೌರವಿಸಿದರು. ಚಂದ್ರಕಾಂತ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಜೈಪಾಲಸಿಂಗ್ ಸಮೋರಕರ, ಡಿಎಸ್‌ಓ ವೆಂಕಟೇಶ ರಾಠೋಡ, ಐ.ಎಸ್. ಪೂಜಾರ, ಬಂಜಾರ ಸಮುದಾಯದ ಮುಖಂಡರಾದ ದಯಾನಂದ ಪವಾರ, ಸುರೇಶ ಮಹಾರಾಜ ಲಮಾಣಿ ಮುಂತಾದವರಿದ್ದರು. ರಾಘು ಶಾಂತಗೇರಿ ಕಾರ್ಯಕ್ರಮ ನಿರೂಪಿಸಿದರು.
ಡಾ. ಸಂಜೀವ ನಾರಪ್ಪನವರ, ಶಿವಪ್ಪ ನಾಯಕ, ಲಕ್ಷö್ಮಣ ದೇವಲಪ್ಪ ಲಮಾಣಿ, ಚನ್ನಪ್ಪ ದೇವಲಪ್ಪ ಲಮಾಣಿ, ತೇಜಪ್ಪ ಲಕ್ಷ್ಮಣ ಲಮಾಣಿ, ತೇಜಪ್ಪ ಕಟ್ಟಿಮನಿ, ಸುರೇಶ ಪವಾರ, ಲೋಕೇಶ ಕಟ್ಟಿಮನಿ, ಕುಬೇರಪ್ಪ ಪವಾರ, ವಿಠ್ಠಲ ಪೂಜಾರ, ಠಾಕ್ರಪ್ಪ ಉ.ಚನ್ನಳ್ಳಿ, ಠಾಕೂರ ಬ.ಲಮಾಣಿ, ಮಲ್ಲಿಕಾರ್ಜುನ ಖಂಡಮ್ಮನವರ, ಉಮೇಶ ಲಮಾಣಿ, ರೂಪಾಬಾಯಿ ಜಾಧವ ಮುಂತಾದವರು ಪಾಲ್ಗೊಂಡಿದ್ದರು.
ನ್ಯಾಯವಾದಿ ರವಿಕಾಂತ ಅಂಗಡಿ ಮಾತನಾಡಿ, ನಮ್ಮ ಹಿಂದುಳಿದ ಸಮಾಜದಲ್ಲಿ ಇಂತಹ ಸೇವಾ ಪ್ರತಿಷ್ಠಾನ ಹುಟ್ಟುಹಾಕಿ ಸೇವಾ ಪ್ರತಿಷ್ಠಾನದ ವತಿಯಿಂದ ಅಂಗವಿಕಲರ ಸಲಕರಣೆಗಳನ್ನು ಉಚಿತವಾಗಿ ವಿತರಿಸಿ ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗುತ್ತಿರುವ ಸುಭಾಸ ಲಮಾಣಿಯವರ ಸೇವಾ ಕಾರ್ಯ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.