ಬೆಂಗಳೂರು: ಧರ್ಮಸ್ಥಳದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣ ಶುರುವಾಗಿದೆ. ನಿನ್ನೆ ಯೂಟ್ಯೂಬರ್ಗಳು ಹಾಗೂ ಮತ್ತೊಂದು ಗುಂಪುಗಳ ನಡುವೆ ಶುರವಾದ ವಾಗ್ವಾದ ನಂತರ ಜಗಳಕ್ಕೆ ತಿರುಗಿತ್ತು.
Advertisement
ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯಾರು ಕಾನೂನು ಕೈಗೆತ್ತಿಕೊಳ್ಳಬಾರದು. ಸರಿಯಾದ ಸುದ್ದಿ, ಸುಳ್ಳು ಸುದ್ದಿ ಎಂದು ಜನರೇ ಹಿಂಸಾಚಾರ ಮಾಡೋದು ಸರಿಯಲ್ಲ. ಧರ್ಮಸ್ಥಳ ಕೇಸ್ನಲ್ಲಿ ಈಗಾಗಲೇ ಎಸ್ಐಟಿ (SIT) ತನಿಖೆ ಆಗುತ್ತಿದೆ.
ಮೊದಲು ತನಿಖೆ ಆಗಲಿ. ಕೋರ್ಟ್ನಲ್ಲೂ ಈ ಬಗ್ಗೆ ಕೇಸ್ ಇದೆ. ತನಿಖೆ ನಡೆಯುವಾಗ ಯಾರೂ ಹೀಗೆ ಮಾಡಬಾರದು ಎಂದು ತಿಳಿಸಿದ್ದಾರೆ. ಫೇಕ್ ನ್ಯೂಸ್ ತಡೆಗೆ ಸರ್ಕಾರದಿಂದ ಬಿಲ್ ತರುತ್ತಿದ್ದೇವೆ. ಅದು ಬಂದ ಮೇಲೆ ಇವೆಲ್ಲಾ ಕಡಿಮೆ ಆಗುತ್ತದೆ. ಹೀಗಾಗಿ ಏನೇನೋ ಅರ್ಥೈಸಿಕೊಂಡು ಜನರು ಯಾರು ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ