ನವದೆಹಲಿ: ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ CRPF ವಿಐಪಿ ಭದ್ರತಾ ವಿಭಾಗದಿಂದ ಝೆಡ್ ಕ್ಯಾಟಗರಿ ಭದ್ರತೆ ಒದಗಿಸಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಅಧಿಕೃತ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಐದು ಬಾರಿ ಬಿಹಾರ ಶಾಸಕರಾಗಿರುವ ನಿತಿನ್ ನಬಿನ್, ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಈ ಹುದ್ದೆ ಅಲಂಕರಿಸಿದ ನಾಯಕ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.
ನಿತಿನ್ ನಬಿನ್ ಅವರನ್ನು ಪ್ರಧಾನಿ ಮೋದಿ ಕೂಡ ಬಹಿರಂಗವಾಗಿ ಶ್ಲಾಘಿಸಿದ್ದು, “ಅವರು ನನ್ನ ಬಾಸ್, ನಾನು ಪಕ್ಷದ ಕಾರ್ಯಕರ್ತ” ಎಂದು ಹೇಳಿದ್ದಾರೆ.
ಈ ಹಿಂದೆ ಜೆ.ಪಿ. ನಡ್ಡಾ ಅವರಿಗೆ ಕೂಡ ಇದೇ ರೀತಿಯ ಭದ್ರತೆ ಒದಗಿಸಲಾಗಿತ್ತು. ಈಗ ನಿತಿನ್ ನಬಿನ್ ಕೂಡ ಕೇಂದ್ರದ ಉನ್ನತ ಭದ್ರತಾ ಪಟ್ಟಿಗೆ ಸೇರಿದ್ದಾರೆ.



