ವಿಜಯಸಾಕ್ಷಿ ಸುದ್ದಿ, ಬಾಗಲಕೋಟೆ
ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಅವರು ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರು ಜಿಲ್ಲೆಯಲ್ಲಿ ನೊ ವ್ಯಾಕ್ಷಿನ್ ನೊ ಶಾಪ್ ಓಪನ್ ಎಂಬ ನಿಯಮ ಜಾರಿಗೊಳಿಸಿದ್ದಾರೆ. ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಅವರು ಈ ನಿಯಮ ಜಾರಿಗೊಳಿಸಿದ್ದಾರೆ.
ಈ ಮೂಲಕ ಅನ್ ಲಾಕ್ ನಂತರವೂ ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ವ್ಯಾಕ್ಷಿನ್ ಹಾಕಿಸಿಕೊಂಡವರಿಗೆ ಮಾತ್ರ ಅಂಗಡಿ ತೆರೆಯಲು ಅವಕಾಶ ನೀಡಲು ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ.
ದಿನಸಿ ಅಂಗಡಿ, ಹೊಟೇಲ್, ಚಹಾದ ಅಂಗಡಿ, ಬಾರ್ ರೆಸ್ಟೊರೆಂಟ್, ಎಲೆಕ್ಟ್ರಿಕ್ ಅಂಗಡಿ, ಸಲೂನ್, ಬಟ್ಟೆ ಅಂಗಡಿ ಸೇರಿದಂತೆ ಎಲ್ಲ ಅಂಗಡಿಗಳ ಮಾಲೀಕರಿಗೆ ಈ ಕುರಿತು ಸೂಚನೆ ನೀಡಲಾಗಿದೆ.
ಅಂಗಡಿ ತೆರೆಯಬೇಕಾದರೆ ಮಾಲೀಕರು, ಅಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ ಎಲ್ಲರೂ ವ್ಯಾಕ್ಷಿನ್ ಹಾಕಿಸಿಕೊಂಡಿರಲೇಬೇಕು. ಒಂದು ವೇಳೆ ಲಸಿಕೆ ಪಡೆಯದೆ ಅಂಗಡಿ ತೆರೆದರೆ ಅಂಗಡಿ ಬಂದ್ ಮಾಡಿಸಲಾಗುವುದು. ಕಡ್ಡಾಯವಾಗಿ ಲಸಿಕೆ ಪಡೆದ ಕುರಿತು ದಾಖಲೆ ತೋರಿಸಬೇಕು ಎಂದು ಸೂಟಿಸಿದ್ದಾರೆ.
ಅನ್ ಲಾಕ್ ಗೂ ಮುನ್ನ ಆದ್ಯತೆ ಮೇರೆಗೆ ಇಂತಹ ವರ್ಗದವರಿಗೆ ಲಸಿಕೆ ಪಡೆಯಲು ಅನುಕೂಲ ಕಲ್ಪಿಸುತ್ತೇವೆ. ಜನರೊಂದಿಗೆ ನಿಕಟ ಸಂಪರ್ಕ ಹೊಂದುವ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಹಾಗೂ ಅಲ್ಲಿ ಕೆಲಸ ಮಾಡುವವರಿಗೆ ಲಸಿಕೆ ಕಡ್ಡಾಯಗೊಳಿಸಲಾಗಿದೆ.