ವಿಜಯಸಾಕ್ಷಿ ಸುದ್ದಿ, ಗದಗ
Advertisement
ನಾಗರ ಪಂಚಮಿಗೂ ಮೊದಲೇ ನರಗುಂದದ ಅಂಗಡಿಯೊಂದರಲ್ಲಿ ನಾಗರಾಜ್ ದರ್ಶನ ನೀಡಿದ್ದಾನೆ! ಗದಗ ಜಿಲ್ಲೆ ನರಗುಂದ ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿರುವ ಸುರೇಶ್ ಪಟ್ಟೇದ್ ಎಂಬುವರಿಗೆ ಸೇರಿದ ದಲ್ಲಾಳಿ ಅಂಗಡಿಯಲ್ಲಿ ನಾಗಪ್ಪ ಪ್ರತ್ಯಕ್ಷನಾಗಿದ್ದ.

ಅಂಗಡಿಯ ಒಳಗೇ ಇರುವ ವೇಳೆ ಕಾಣಿಸಿಕೊಂಡ ನಾಗರಹಾವನ್ನು ಕಂಡು ಭಯಭೀತರಾದ ಅಂಗಡಿಯ ಮಾಲಕ ಸುರೇಶ್ ಪಟ್ಟೇದ್ ತಕ್ಷಣ ನಗರದ ಉರಗತಜ್ಞ ಸ್ನೇಕ್ ಬುಡ್ಡಾಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ವಿನಂತಿಸಿದರು.
ಕೆಲವೇ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಸ್ನೇಕ್ ಬುಡ್ಡಾ ನಾಗರಹಾವನ್ನು ಸೆರೆಹಿಡಿದು, ಹಾವಿನೊಂದಿಗೆ ಕೆಲಸಮಯ ಕಳೆದು, ನಿರ್ಜನ ಪ್ರದೇಶಕ್ಕೆ ಬಿಟ್ಟು ಬಂದಾಗ ಅಂಗಡಿಯ ಮಾಲಕ ಹಾಗೂ ಎಪಿಎಂಸಿ ಯಾರ್ಡ್‌ನ ಸಾರ್ವಜನಿಕರು ನಿಟ್ಟುಸಿರುಬಿಟ್ಟರು.
