ವಿಜಯಸಾಕ್ಷಿ ಸುದ್ದಿ, ನರಗುಂದ;
ನರಗುಂದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರೂ ಆಗಿರುವ ಆನಂದ ಭೋವಿ ಅವರು ರಚಿಸಿರುವ “ದೀಪ ಆರುವ ಹೊತ್ತು ಎಂಬ ಗಜಲ್ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿ ಅ.30 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕಿನ ಬೈರನಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಆಯೋಜಿಸಲಾಗಿದೆ.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಶ್ರೀ ದೊರೆಸ್ವಾಮಿ ವಿರಕ್ತಮಠ, ಬೈರಮಹಟ್ಟಿ ಹಾಗೂ ಸಮೀರ ಪ್ರಕಾಶನ ಇವರ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಶಾಂತಲಿಂಗ ಸ್ವಾಮಿಗಳು ವಹಿಸುವರು.

ಕಾರ್ಯಕ್ರಮದಲ್ಲಿ ದೀಪ ಆರುವ ಹೊತ್ತು ಗಜಲ್ ಸಂಕಲನವನ್ನು ಗಜಲ್ ಕವಿ ಕೆ. ಅಲ್ಲಾಗಿರಿರಾಜ್ ಬಿಡುಗಡೆ ಮಾಡುವರು.
ಮುಖ್ಯ ಅತಿಥಿಗಳಾಗಿ ತಾ.ಪಂ.ಇಓ ಚಂದ್ರಶೇಖರ ಕುರ್ತಕೋಟಿ, ಗದಗ ಎಡಿಎಂ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ್, ಬಿಇಓ ರಾಜೇಶ್ವರಿ, ಕವಿಗಳಾದ ಆನಂದ ಬೋವಿ ಕಲಾವಿದ ಅಶೋಕ್ ಸುತಾರ, ಗಜಲ್ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವವರು.
ಈ ಕಾರ್ಯಕ್ರಮ ಯಶಸ್ವಿಗೆ ಚಿಕ್ಕನರಗುಂದ ಗ್ರಾಮ ಪಂಚಾಯತಿ ಅಡಳಿತ ಮಂಡಳಿ ಶುಭ ಹಾರೈಸಿದೆ.