ವಿಜಯಸಾಕ್ಷಿ ಸುದ್ದಿ, ನವದೆಹಲಿ
ಕೊರೊನಾ ಹೆಮ್ಮಾರಿಯಿಂದಾಗಿ ಇಡೀ ದೇಶದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿತ್ತು. ಇದರಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಎರಡನೇ ಅಲೆಯಲ್ಲಿಯೇ ಹೀಗಾದರೆ, ಮೂರನೇ ಅಲೆಯಲ್ಲಂತೂ ಇದರ ಪರಿಸ್ಥಿತಿ ಕೆಟ್ಟದ್ದಾಗಿರುತ್ತದೆ. ಇದರಿಂದಾಗಿ ದೇಶದ ಆರ್ಥಿಕತೆ ತೀವ್ರ ಹಿನ್ನಡೆ ಅನುಭವಿಸಲಿದೆ.
ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಬರೋಬ್ಬರಿ ರೂ. 5.4 ಲಕ್ಷ ಕೋಟಿ ನಷ್ಟ ಉಂಟಾಗಿದೆ. ಇದು ಕೊರೊನಾ ಎರಡನೇ ಅಲೆಯಿಂದಾಗಿ ಉಂಟಾದ ನಷ್ಟವಾಗಿದೆ. ಇದನ್ನು ಬರ್ಕಲೇ ಸಂಸ್ಥೆ ಅಂದಾಜು ಮಾಡಿದೆ.
2ನೇ ಅಲೆಯಿಂದ ದೇಶದಲ್ಲಿ ನಿರುದ್ಯೋಗ ಸಂಖ್ಯೆ ಕೂಡ ಹೆಚ್ಚಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಾಕ್ ಡೌನ್ ನಿಂದಾಗಿ 2.7 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ನಷ್ಟದಿಂದಾಗಿ ದೇಶದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದಾಗಿ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರ, ಆರ್ಥಿಕತೆ ಚೇತರಿಕೆಗೆ ಯಾವ ಪ್ಯಾಕೇಜ್ ಕೂಡ ಘೋಷಿಸಿಲ್ಲ. ಜನರ ಕೈಗೆ ನೇರ ದುಡ್ಡು ಸಿಗುವಂತಾಗಬೇಕು ಎಂದು ಬರ್ಕಲೇ ಸಂಸ್ಥೆ ಸಲಹೆ ನೀಡಿದೆ.
ಕೊವಿಡ್ ನ ಎರಡನೇ ಅಲೆಯಿಂದಾಗಿ ಪ್ರಸಕ್ತ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ಶೇ. 0.8ರಷ್ಟು ಕುಗ್ಗಿದೆ. ಮೂರನೆ ಅಲೆ ಬಂದರಂತೂ ಆರ್ಥಿಕತೆಗೆ ಇನ್ನೂ ಪೆಟ್ಟು ಬೀಳಲಿದೆ. ಮೂರನೆ ಅಲೆ ಕನಿಷ್ಠ 8 ವಾರಗಳ ಕಾಲವಾದರೂ ಇರಲಿದೆ ಎಂದು ಅಂದಾಜಿಸಿದರೂ ದೇಶದ ಆರ್ಥಿಕತೆ 3.1 ಲಕ್ಷ ಕೋಟಿಯಷ್ಟು ನಷ್ಟವಾಗಬಹುದು ಆಗ ದೇಶದ ಜಿಡಿಪಿ ಶೇ. 7.7ಕ್ಕೆ ಕುಸಿಯಲಿದೆ ಎಂದು ಸಂಸ್ಥೆ ಅಂದಾಜಿಸಿದೆ.