ಕೊವಿಡ್ ಕಳವಳ: ಮುಂದಿನ ವಾರಕ್ಕೇ ಕಲಾಪ ಬಂದ್?

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಸದ್ಯ ನಡೆಯುತ್ತಿರುವ ಸಂಸತ್ ಮುಂಗಾರು ಅಧಿವೇಶನ ಬರುವ ವಾರದ ಮಧ್ಯದಲ್ಲೇ ಕೊನೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಕೊವಿಡ್ ಆತಂಕವೇ ಕಾರಣವಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿ 30 ಸಂಸದರು ಕೊವಿಡ್ ಬಾಧಿತರಾಗಿ ಕಲಾಪದಿಂದ ಹೊರಗಿದ್ದಾರೆ.

Advertisement

ಬಿಜೆಪಿಯ ವಿನಯ ಸಹಸ್ರಬುದ್ಧೆ ವಿಷಯವೇ ಈಗ ಹಲವು ಸಂಸದರನ್ನು ಚಿಂತೆಗೀಡು ಮಾಡಿದೆ. ಕಳೆದ ವಾರ ಕಲಾಪ ಆರಂಭಕ್ಕೂ ಮುನ್ನ ಸಹಸ್ರಬುದ್ಧೆ ಅವರ ಕೊವಿಡ್ ಟೆಸ್ಟ್ ನೆಗೆಟಿವ್ ಬಂದಿತ್ತು. ಈ ವಾರದ ಕಲಾಪದಲ್ಲಿ ಟ್ರೇಜರಿ ಬೆಂಚ್‌ನಿಂದ ಅವರೂ ಮಾತನಾಡಿದ್ದರು. ಶುಕ್ರವಾರವೂ ಅವರು ಮಾತಾನಾಡಬೇಕಿತ್ತು. ಆದರೆ ಅವರು ಗುರುವಾರ ಸಂದೇಶವೊಂದನ್ನು ಕಳಿಸಿ, ತಲೆನೋವು ಮತ್ತು ಆಯಾಸದ ಕಾರಣಕ್ಕೆ ಪರೀಕ್ಷೆ ಮಾಡಿಸಿದಾಗ ನನಗೆ ಕೊವಿಡ್ ದೃಢಪಟ್ಟಿದೆ ಎಂದಿದ್ದಾರೆ.

ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಟಿಎಂಸಿಯ ಡೆರೆಕ್ ಒ ಬ್ರೇನ್, ಕಲಾಪದಲ್ಲಿ ಸಹಸ್ರಬುದ್ಧೆಯವರ ಸಮೀಪದ ಸೀಟುಗಳಲ್ಲಿ ಕುಳಿತವರು ಮತ್ತು ಅವರ ಸಂಪರ್ಕಕ್ಕೆ ಬಂದವರು ಸ್ವಯಂ ಐಸೊಲೇಷನ್‌ಗೆ ಒಳಗಾಗಿ. ಸಹಸ್ರಬುದ್ಧೆ  ಸೆಂಟ್ರಲ್ ಹಾಲ್ ಮತ್ತು ಹೌಸ್ ಲಾಬಿಯಲ್ಲೂ ಸಮಯ ಕಳೆದಿರುವ ಸಾಧ್ಯತೆ ಇದೆ. ಈ ಬಗ್ಗೆಯೂ ಗಮನ ಹರಿಸಿ’ ಎಂದಿದ್ದಾರೆ.

ಕೊವಿಡ್ ಕಾಲದಲಿ ರೂಪಿಸಿದ 11 ಮಸೂದೆ/ತಿದ್ದುಪಡಿ ಮಸೂದೆಗಳಿಗೆ ಬರುವ ವಾರದ ಮಧ್ಯದೊಳಗೆ ಅಂಗೀಕಾರ ಪಡೆದ ನಂತರ ಸಂಸತ್ ಕಲಾಪವನ್ನು ಸ್ಥಗಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಹಾಗೇನಾದರೂ ಆದರೆ ಸರ್ಕಾರ ದೊಡ್ಡ ಟೀಕೆಗಳನ್ನು ಎದುರಿಸಬೇಕಿದೆ.

ಪರೀಕ್ಷಾರ್ಥಿಗಳು ಎಷ್ಟೇ ಗೋಗರೆದರೂ ಜೆಇಇ ಮತ್ತು ನೀಟ್ ಪರೀಕ್ಷೆ ನಡೆಸಿದ ಸರ್ಕಾರ, ಈಗ ಯಾಕೆ ಹಿಂದೇಟು ಹಾಕಿತು ಎಂಬ ಪ್ರಶ್ನೆ ಏಳಲಿವೆ. ಮೋದಿ ವಿರುದ್ಧ ಇನ್ನೂ ದೊಡ್ಡ ಪ್ರಮಾಣದ ಟ್ವಿಟರ್ ಟ್ರೆಂಡ್‌ಗಳು ಶುರುವಾಗಲಿವೆ.


Spread the love

LEAVE A REPLY

Please enter your comment!
Please enter your name here