ವಿಜಯಸಾಕ್ಷಿ ಸುದ್ದಿ, ಗದಗ
ಕಳೆದ ಒಂದೂವರೇ ವರ್ಷಗಳ ಕಾಲ ಗದಗ ಜಿಲ್ಲೆಯ ಎಸ್ಪಿಯಾಗಿ ಕಾರ್ಯನಿರ್ವಹಿಸಿದ ಯತೀಶ್ ಎನ್ ಅವರು ಮಂಡ್ಯ ಜಿಲ್ಲೆಗೆ ವರ್ಗಾವಣೆ ಆಗಿದ್ದಾರೆ.
ಗದಗ ಜಿಲ್ಲೆಗೆ ನೂತನ ಎಸ್ಪಿಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಪ್ರಕಾಶ್ ದೇವರಾಜು ಆಗಮಿಸಲಿದ್ದಾರೆ.
ಶಿವಪ್ರಕಾಶ್ ದೇವರಾಜು ಅವರ 2014 ರ ಕೇಡರ್‌ನ ಐಪಿಎಸ್ ಅಧಿಕಾರಿ ಆಗಿದ್ದಾರೆ.
ಗದಗ ಜಿಲ್ಲೆಯಲ್ಲಿ ಜೆಂಟಲ್ ಮನ್ ಎಂದೆ ಖ್ಯಾತಿ ಗಳಿಸಿದ್ದ ಎಸ್ಪಿ ಯತೀಶ್ ಎನ್ ಅವರು ಲಾಕ್ ಡೌನ್ ವೇಳೆ ದಕ್ಷತೆಯಿಂದ ಕೆಲಸ ನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದರು.




