ಗದಗ ಜಿಲ್ಲೆಯ ಗಾಳಿ ಗುಣಮಟ್ಟದಲ್ಲಿ ನಂ. 1; ಕಪ್ಪತಗುಡ್ಡದ ಹಸಿರು ಹೊದ್ದ ನಾಡಿಗೆ ಮತ್ತೊಂದು ಗರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಕಪ್ಪತ್ತಗುಡ್ಡದ ಹಸಿರು ಛಾಯೆಯಲ್ಲಿ ಮೈದಳೆದು ನಿಂತ ಗದಗ ನಾಡಿಗೆ ಈಗ ಮತ್ತೊಂದು ಗರಿ ಬಂದಿದೆ.
ಕಪ್ಪತ್ತಗುಡ್ಡ ಸೇರಿದಂತೆ ಹೆಚ್ಚಿನ ಹಸಿರು ಹೊಂದಿರುವ ಜಿಲ್ಲೆಯಲ್ಲಿ ಈಗ ದೇಶದಲ್ಲಿಯೇ ಗುಣಮುಟ್ಟದ ಗಾಳಿ ಇದೆ ಎಂದು ತಿಳಿದು ಬಂದಿದೆ. ಈ ಕೀರ್ತಿಗೆ ಸದ್ಯ ಈ ಜಿಲ್ಲೆ ಪಾತ್ರವಾಗಿದೆ. ಜೂ. 15ರಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದ ಉತ್ತಮ ಗುಣಮಟ್ಟದ ಗಾಳಿ ಹೊಂದಿರುವ ಜಿಲ್ಲೆಗಳಲ್ಲಿ ಗದಗ ಜಿಲ್ಲೆ ಮೊದಲನೇ ಸ್ಥಾನ ಪಡೆದುಕೊಂಡಿದೆ.

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ 131 ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಂತೆ ದೇಶದ ಒಟ್ಟು 45 ನಗರಗಳು ಉತ್ತಮ ಗುಣಮಟ್ಟದ ಗಾಳಿ ಹೊಂದಿವೆ. 65 ನಗರಗಳ ಗಾಳಿಯ ಗುಣಮುಟ್ಟ ಸಮಾಧಾನಕರ ಮತ್ತು 21 ನಗರಗಳ ಗಾಳಿಯ ಸ್ಥಿತಿ ಉತ್ತಮವಾಗಿದೆ ಎಂದು ಅಧಿಕೃತವಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಈ ಮಂಡಳಿ ಕಳೆದ 24 ಗಂಟೆಗಳಲ್ಲಿ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಗದಗ ಜಿಲ್ಲೆಗೆ ಮೊದಲನೇ ಸ್ಥಾನ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಳಿತವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಜನರು ಮೈಮರೆತು ಪರಿಸರ ವಿರೋಧಿ ಕಾರ್ಯಕ್ಕೆ ಕೈ ಹಾಕಿದರೆ ಗಾಳಿಯನ್ನು ನಾವೇ ಹಾಳು ಮಾಡಿದಂತಾಗುತ್ತದೆ.

ಈಗಾಗಲೇ ಕಪ್ಪತ್ತಗುಡ್ಡ ಹಸಿರು ಉಸಿರಿಗಾಗಿ ಸಾಕಷ್ಟು ಹೆಸರು ಮಾಡಿದೆ. ಏಷ್ಯಾದಲ್ಲಿಯೇ ಈ ಕಪ್ಪತ್ತುಗುಡ್ಡ ಅತೀ ಹೆಚ್ಚು ಗಾಳಿ ಬೀಸುವ ಪ್ರದೇಶವಾಗಿ ಏಷ್ಯಾದಲ್ಲಿಯೇ ಹೆಸರು ಪಡೆದಿದೆ. ಹೀಗಾಗಿಯೇ ನೂರಾರು ಪವನ ವಿದ್ಯುತ್ ಯಂತ್ರಗಳನ್ನು ಗುಡ್ಡದಲ್ಲಿ ಅಳವಡಿಸಲಾಗಿದೆ. ಇಲ್ಲಿನ ಹಸಿರಿನಿಂದಾಗಿ ನಗರ ಮತ್ತಿತರ ಪ್ರದೇಶಗಳಲ್ಲಿ ಉತ್ತಮ ಪ್ರಾಣವಾಯು ಬೀಸುತ್ತಿದೆ. ಈ ನಿಟ್ಟಿನಲ್ಲಿ ಗದಗ ಸ್ವಚ್ಛ ಹಾಗೂ ಉತ್ತಮ ಗಾಳಿ ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಿರಂತರ ವಾಯುಗುಣಮಟ್ಟದ ಮಾಪನ ಕೇಂದ್ರ ಅಳವಡಿಸಲಾಗಿದೆ. ಇದು ಪ್ರತಿದಿನ ವಾಯು ಗುಣಮಟ್ಟ ತಿಳಿಸುತ್ತದೆ. ಜೂ. 15ರಂದು ಶೇ. 10ರಷ್ಟು ಸೂಚ್ಯಂಕ ಪ್ರದರ್ಶಿಸಿದೆ. ಇದೇ ಡಾಟಾವನ್ನ ಸ್ಥಳೀಯ ಪರಿಸರ ಇಲಾಖೆಯು ಕೇಂದ್ರ ಇಲಾಖೆಗೆ ಕಳುಹಿಸಿತ್ತು. ಇದು ಕೇಂದ್ರ ವಾಯು ನಿಯಂತ್ರಣ ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದೆ. ಈ‌ ಭಾಗದಲ್ಲಿ ಸಸ್ಯಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಪ್ಪತ್ತಗುಡ್ಡ ಏಷ್ಯಾದಲ್ಲಿಯೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ ಅಂತ ಕೀರ್ತಿಗೆ ಪಾತ್ರವಾಗಿದೆ. ಜೊತೆಗೆ ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ ಡೌನ್‌ ಜಾರಿಗೊಳಿಸಿದಾಗ ನಗರದ ವಾಯು ಗುಣಮಟ್ಟದಲ್ಲಿ ಮಹತ್ತರ ಸುಧಾರಣೆಗಳು ಕಂಡು ಬಂದಿವೆ. ಜಿಲ್ಲೆಯಲ್ಲಿ ವಾರದಿಂದ ನಿರಂತರ ಮಳೆ, ಮೋಡ ಕವಿದ ವಾತಾವರಣದಿಂದಾಗಿ ವಾಯು ಮಾಲಿನ್ಯ ಕಡಿಮೆಯಾಗಿದೆ.

ಶೋಭಾ, ಪರಿಸರ ಇಲಾಖೆ ಅಧಿಕಾರಿ

ಲಾಕ ಡೌನ್ ಕಾರಣವೋ ಅಥವಾ ಹಸಿರು ಸಹ್ಯಾದ್ರಿಯ ಕಪ್ಪತ್ತಗುಡ್ಡದ ಕಾರಣವೋ ಗೊತ್ತಿಲ್ಲ. ಗದಗ ನಗರವು ದೇಶದಲ್ಲಿಯೇ ಉತ್ತಮ‌ ಗಾಳಿ ನೀಡುವದರಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದಿದೆ. ಆದರೆ, ಈ‌ ಶುದ್ಧ ಗಾಳಿಯ‌ನ್ನು ನಗರದ ಜ‌ನತೆ ಅಶುದ್ಧ ಮಾಡದ‌ತೆ ಹೀಗೆಯೇ ಕಾಪಾಡಿಕೊಂಡು ಹೋಗಬೇಕು. ಪರಿಸರಕ್ಕೆ ಮಾರಕವಾದ ಚಟುವಟಿಕೆಗಳನ್ನು ನಿಲ್ಲಿಸಿ ಜಿಲ್ಲೆಗೆ ಉಸಿರಾಗಿರುವ ಹಸಿರನ್ನು ಉಳಿಸಿಕೊಂಡು ಕಾಪಾಡಿಕೊಂಡು ಹೋಗಬೇಕು.

ಸೂರ್ಯಸೇನ್, ಅರಣ್ಯ ಇಲಾಖೆಯ ಅಧಿಕಾರಿ

Spread the love

LEAVE A REPLY

Please enter your comment!
Please enter your name here