ಚಂದನವನದ ಹಿರಿಯ ನಟ ಬಿ.ಎಂ. ಕೃಷ್ಣೇಗೌಡ ಇನ್ನಿಲ್ಲ!

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

Advertisement

ರಂಗಭೂಮಿ, ಸಿನಿಮಾ ಹಾಗೂ ಧಾರಾವಾಹಿಯ ಹಿರಿಯ ಕಲಾವಿದ ಬಿ.ಎಂ. ಕೃಷ್ಣೇಗೌಡ(80) ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇತ್ತೀಚೆಗಷ್ಟೇ ಕೃಷ್ಣೇಗೌಡ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ, ಸೋಂಕಿನಿಂದ ಗುಣಮುಕರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಂದು ಬೆಳಗಿನ ಜಾವ 4.15ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಅವರನ್ನು ಸಾವನ್ನಪ್ಪಿದ್ದಾರೆ. ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕಳೆದ ತಿಂಗಳು ಕೃಷ್ಣೇಗೌಡರ ಪುತ್ರ ಸತೀಶ್ ಕೊರೊನಾ ಸೋಂಕಿಗೆ ಬಲಿಯಾಗಿದ್ದರು.

ಮುಖ್ಯಮಂತ್ರಿ ನಾಟಕದಲ್ಲಿ ಪಕ್ಷದ ಅಧ್ಯಕ್ಷನಾಗಿ ಅಭಿನಯಿಸುವ ಮೂಲಕ ಕೃಷ್ಣೇ ಗೌಡ ಅವರು ಖ್ಯಾತಿ ಪಡೆದಿದ್ದರು. ಕನ್ನಡ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರು.
ಹಿರಿಯ ಕಲಾವಿದರನ್ನು ಕಳೆದುಕೊಂಡ ಚಂದನವನ ತಬ್ಬಲಿಯಾದಂತಾಗಿದೆ. ಹೀಗಾಗಿ ಹಲವು ನಟ – ನಟಿಯರು ಇವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.


Spread the love

LEAVE A REPLY

Please enter your comment!
Please enter your name here