ವಿಜಯಸಾಕ್ಷಿ ಸುದ್ದಿ, ಡೆಹ್ರಾಡೂನ್
ಚಿಪ್ಕೋ ಚಳುವಳಿಯ ನಾಯಕ ಸುಂದರ್ ಲಾಲ್(94) ಬಹುಗುಣ ಅವರನ್ನು ಮಹಾಮಾರಿ ಬಲಿ ಪಡೆದಿದೆ.
ಸುಂದರ್ ಲಾಲ್ ಅವರು ಇಂದು ಉತ್ತರಾಖಂಡದ ರಿಷಿಕೇಶ್ ನಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ರಿಷಿಕೇಶ್ ನ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ತಮ್ಮ ಜೀವಮಾನವಿಡಿ ಪರಿಸರವಾದಿಯಾಗಿ ಗುರಿತಿಸಿಕೊಂಡಿದ್ದ ಸುಂದರ್ ಲಾಲ್ ಅವರು ಚಿಪ್ಕೋ ಚಳುವಳಿ ಮೂಲಕ ಮರಗಳನ್ನು ಕಡಿಯದಂತೆ ಆಂದೋಲನ ಪ್ರಾರಂಭಿಸಿದ್ದರು. 1990ರಲ್ಲಿ ತೇರಿ ಡ್ಯಾಮ್ ಆಂದೋಲನ ಪ್ರಾರಂಭಿಸಿದ್ದರು. ಇದರ ಭಾಗವಾಗಿ ಅವರು 1995ರಲ್ಲಿ ಜೈಲುವಾಸ ಅನುಭವಿಸಿದ್ದರು. ಅವರ ಪರಿಸರ ಆಂದೋಲನ ಗುರುತಿಸಿದ್ದ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.



