ವಿಜಯಸಾಕ್ಷಿ ಸುದ್ದಿ, ಗದಗ
Advertisement
ಜೈನ್ ಸಮಾಜದ ವತಿಯಿಂದ ಗದಗ-ಬೆಟಗೇರಿ ಅವಳಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್ ಸೇರಿದಂತೆ ಅಗತ್ಯ ಚಿಕಿತ್ಸೆಗಾಗಿ ದಾಖಲಾದವರ ಸಂಬಂಧಿಕರು ಆಸ್ಪತ್ರೆಯ ಹೊರೆಗಿರುವ ಅವರ ಕುಟುಂಬಸ್ಥರಿಗೆ ಪಲಾವ್ ಪ್ಯಾಕೆಟ್ ವಿತರಿಸಲಾಯಿತು.
ಗದಗ ಜಿಮ್ಸ್ ಕೋವಿಡ್ ಆಸ್ಪತ್ರೆ, ಜರ್ಮನಿ ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಜೈನ ಸಮಾಜದ ಅಧ್ಯಕ್ಷ ಮನೋಜ ಭಾಫಣಾ ಸೇರಿ 8ರಿಂದ 10 ಜನರ ತಂಡ ಶನಿವಾರ 300 ಕಿಟ್‌ಗಳನ್ನು ವಿತರಣೆ ಮಾಡಿದೆ. ಮುಂದಿನ 7 ದಿನಗಳ ಕಾಲ ಅವಳಿ ನಗರದಾದ್ಯಂತ ಆಸ್ಪತ್ರೆಯ ಹೊರಗೆ ಆತಂಕದಲ್ಲಿ ಕಾಯುತ್ತಿರುವ ಕುಟುಂಬಸ್ಥರಿಗೆ ಆಹಾರದ ಪ್ಯಾಕೆಟ್ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.