–ಪಕ್ಷಬೇಧ ಮರೆತು ಬೆಂಬಲಿಸಿ: ಶರಣಪ್ಪ ಕೊತ್ವಾಲ್
Advertisement
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ತುಂಗಭದ್ರಾ ಜಲಾಶಯದಿಂದ ಏಪ್ರಿಲ್ 30ರವರೆಗೆ ನೀರು ಹರಿಸದಿದ್ದರೆ ಕೆಳಭಾಗದ ರೈತರಿಗೆ ತೊಂದರೆಯಾಗಲಿದೆ. ಹಾಗಾಗಿ ಏಪ್ರಿಲ್ 10ರ ಬದಲಾಗಿ 30ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ಏಪ್ರಿಲ್ 9ರಂದು ಬೆಳಗ್ಗೆ ಮುನಿರಾಬಾದ್ ತುಂಗಭದ್ರಾ ಡ್ಯಾಂನ ಕಾಡಾ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಭಾರತೀಯ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶರಣಪ್ಪ ಕೊತ್ವಾಲ್ ತಿಳಿಸಿದ್ದಾರೆ.
ಇದು ರೈತರ ಒಳಿತಿಗಾಗಿ ನಡೆಯುತ್ತಿರುವ ಹೋರಾಟ. ಬೇರೆ ಸಂದರ್ಭಗಳಲ್ಲಿ ರೈತರ ಪರ ಬೀದಿಗಳಿಯುವ ವಿವಿಧ ಪಕ್ಷಗಳ ಮುಖಂಡರು, ಏಪ್ರಿಲ್ 9ರ ಮುತ್ತಿಗೆಯಲ್ಲಿ ಪಕ್ಷಬೇಧ ಮರೆತು ಬೆಂಬಲಿಸಿ ಪಾಲ್ಗೊಳ್ಳಬೇಕು. ಆ ಮೂಲಕ ರೈತರ ಕುರಿತ ನಿಜ ಕಾಳಜಿ ಪ್ರದರ್ಶಿಸಬೇಕು ಎಂದು ಅವರು ಕರೆ ನೀಡಿದ್ದಾರೆ.