ಪಾದಯಾತ್ರೆಯಿಂದ ಪುಣ್ಯ ಲಭಿಸುವುದರ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ: ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಧರ್ಮ ಜಾಗೃತಿಗಾಗಿ ಓಣಿಗಳಲ್ಲಿ ಇಂದಿನಿಂದ ಪ್ರಾರಂಭವಾಗಿರುವ ಪಾದಯಾತ್ರೆಯಿಂದ ವೈಯಕ್ತಿಕವಾಗಿ ಪುಣ್ಯ ಲಭಿಸುವುದರ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

Advertisement

ಹಿರೇಮಠದ ಜಾತ್ರಾಮಹೋತ್ಸವದ ಅಂಗವಾಗಿ ಪಟ್ಟಣದ ವಾರ್ಡುಗಳಲ್ಲಿ ಪ್ರಾರಂಭವಾದ ಪಾದಯಾತ್ರೆಗೆ ಹಿರೇಮಠದಲ್ಲಿ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಬೆಳಗಿನ ಅವಧಿಯಲ್ಲಿ ಶಿವನಾಮವನ್ನು ಸ್ಮರಿಸುತ್ತ, ಜಯಘೋಷಗಳನ್ನು ಕೂಗುತ್ತ ಓಣಿಗಳಲ್ಲಿ ಪಾದಯಾತ್ರೆ ಮಾಡುವುದೇ ಒಂದು ಸೊಗಸಾದ ಅನುಭವ. ಇದಕ್ಕೆ ಸಿದ್ಧರಾಗಿ ಬಂದಿರುವ ನಿಮ್ಮನ್ನೆಲ್ಲ ಕಂಡು ಸಂತಸವಾಗಿದೆ. ಜಾತ್ರಾಮಹೋತ್ಸವ ನಡೆಯುವವರೆಗೂ ಈ ಪಾದಯಾತ್ರೆ ನಡೆಯುತ್ತದೆ. ನೀವೆಲ್ಲ ಇದೇ ಸಂಭ್ರಮದಿಂದ ಪಾಲ್ಗೊಳ್ಳಿ ಎಂದು ಶ್ರೀಗಳು ತಿಳಿಸಿದರು.

ಶ್ರೀಗಳೊಂದಿಗೆ ಪಾದಯಾತ್ರೆಯಲ್ಲಿ ಪುರಾಣ ಪ್ರವಚನಕಾರರಾದ ಪಂ. ಅನ್ನದಾನ ಶಾಸ್ತಿçಗಳು, ಪ. ಪಂ. ಅಧ್ಯಕ್ಷ ಫಕೀರಪ್ಪ ಮಳ್ಳಿ, ಡಾ. ಆರ್.ಕೆ. ಗಚ್ಚಿನಮಠ, ಪ್ರಕಾಶ ಪಲ್ಲೇದ, ಶಿಕ್ಷಕ ವಿ.ವಿ. ಅಣ್ಣಿಗೇರಿ, ಸಂಗನಾಳ ವಿರುಪಾಕ್ಷಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ, ಈಶ್ವರ ಬೆಟಗೇರಿ, ಓಣಿಯ ಅನೇಕ ಮಹಿಳೆಯಯರು, ಗಣ್ಯರು ಪಾಲ್ಗೊಂಡಿದ್ದರು.

ಪಾದಯಾತ್ರೆಗಾಗಿ ಪ್ರತಿ ಓಣಿಯಲ್ಲಿ ಮಹಿಳೆಯರು ಮನೆಯ ಮುಂದೆ ಥಳಿ ಸಿಂಪಡಿಸಿ, ರಂಗವಲ್ಲಿ ಹಾಕಿ ಶ್ರೀಗಳನ್ನು ಸ್ವಾಗತಿಸಿಕೊಂಡ ದೃಶ್ಯ ಮನಮೋಹಕವಾಗಿತ್ತು. ಹಿರೇಮಠದ ಓಣಿಯಿಂದ ಪ್ರಾರಂಭವಾದ ಪಾದಯಾತ್ರೆಯು ಜೊಂಡಿಗೇರಿ ಓಣಿ, ದರಗಾ ಓಣಿ, ತ್ರಿಪುರಾಂತಕೇಶ್ವರ ದೇವಸ್ಥಾನ, ಶ್ರೀ ಗಣೇಶ ಗುಡಿ ಓಣಿ ಮೂಲಕ ಹಾದು ಗುಡಿ ಓಣಿಗೆ ಬಂದು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.


Spread the love

LEAVE A REPLY

Please enter your comment!
Please enter your name here