ವಿಜಯಸಾಕ್ಷಿ ಸುದ್ದಿ, ಶಲವಡಿ;
Advertisement
ದ್ವಿ ಚಕ್ರ ವಾಹನಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗದಗ-ನರಗುಂದ ರಸ್ತೆಯ ಶಲವಡಿ ಸಮೀಪ ನಡೆದಿದೆ.
ಗುರುಶಾಂತ್ ನಾವಳ್ಳಿ (26) ಮೃತ ದುರ್ದೈವಿಯಾಗಿದ್ದಾನೆ. ಈರಣ್ಣ ಷಣ್ಮುಖಪ್ಪ ನಾಯ್ಕರ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಸ್ಥಳೀಯರು ಹೇಳುವ ಪ್ರಕಾರ ಮೃತ ವ್ಯಕ್ತಿ ಗುರುಶಾಂತ್ ಶಲವಡಿಯಿಂದ ಜಮೀನಿಗೆ ಮೆಣಸಿನಕಾಯಿ ಕಾಯಲು ನರಗುಂದ ಕಡೆ ಹೋಗುತ್ತಿದ್ದನಂತೆ. ಇನ್ನೊಬ್ಬ ಬೈಕ್ ಸವಾರ ಜಮೀನು ಕೆಲಸ ಮುಗಿಸಿಕೊಂಡು ಊರಿಗೆ ಬರುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.