ಮಾನವೀಯತೆ ಮರೆತ ಆರೋಗ್ಯ ಇಲಾಖೆ

0
Spread the love

-ಕೊರೊನಾ ಸೋಂಕಿತನ ಶವವನ್ನ ಹಗ್ಗದಿಂದ ಎಳೆಯುವ ಪ್ರಯತ್ನದ ಆರೋಪ
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಇದುವರೆಗೂ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದನ್ನ ಗಮನಿಸಿದ್ದೇವೆ. ಈಗ ಸೋಂಕಿನ ಜೊತೆಗೆ ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಹಾಗೆಯೇ ಸೋಂಕಿತರ ಶವಗಳ ಅಮಾನವೀಯ ಸಂಸ್ಕಾರ ಪ್ರಕರಣಗಳು ಕಂಡು ಬರುತ್ತಿವೆ.
ಇಂಥದೊಂದು ಪ್ರಕರಣ ಇದೀಗ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಳ್ಳಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 55 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟು ಕಳೆದ ಮೂರ್ನಾಲ್ಕು ದಿನಗಳಿಂದ ಹೋಮ್ ಐಸೋಲೇಷನ್‌ನಲ್ಲಿ ಇದ್ದರು. ಆದರೆ ನಿನ್ನೆ ರಾತ್ರಿ ಸಾವನ್ನಪ್ಪಿರುವ ಅವರ ಶವಸಂಸ್ಕಾರ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿದ್ದು, ಹಗ್ಗ ತಂದಿದ್ದಾರೆ. ಗ್ರಾಮಸ್ಥರು ಹಗ್ಗ ಯಾಕೆ? ಇಬ್ಬರು ಸಿಬ್ಬಂದಿಯಿಂದ ಶವ ಒಯ್ಯಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ನಾವೆಲ್ಲ ಆ ಕೆಲಸ ಮಾಡ್ತಿವಿ.. ನಿಮಗ್ಯಾಕೆ ಅದೆಲ್ಲ? ಎಂದಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಮಾತಿಗೆ ಮಾತು ಬೆಳೆದಿದ್ದರಿಂದ ಸಿಬ್ಬಂದಿ ಹೊರಟು ಹೋಗಿದ್ದಾರೆ.
ಸೋಮವಾರ ಮಧ್ಯಾಹ್ನವಾದರೂ ಆರೋಗ್ಯ ಇಲಾಖೆಯ ಯೊವೊಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ. ಕುಟುಂಬಸ್ಥರನ್ನು ಮನೆಯೊಳಗೆ ಪ್ರವೇಶಿಸದಂತೆ ಎಚ್ಚರಿಸಿದ್ದರಿಂದ ಶವವೂ ಅನಾಥವಾಗಿ ಬಿದ್ದಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಗಮನ ಹರಿಸಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹ..

Advertisement

Spread the love

LEAVE A REPLY

Please enter your comment!
Please enter your name here